alex Certify ಲಕ್ಷ್ಮಿ ಹಬ್ಬದಲ್ಲಿ ನೈವೇದ್ಯಕ್ಕೆ ಬೇಳೆ ಹೋಳಿಗೆ ಮಾಡುವ ಪ್ಲಾನ್ ಇದ್ಯಾ…..? ಹೂರಣ ನೀರಾದ್ರೆ ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಕ್ಷ್ಮಿ ಹಬ್ಬದಲ್ಲಿ ನೈವೇದ್ಯಕ್ಕೆ ಬೇಳೆ ಹೋಳಿಗೆ ಮಾಡುವ ಪ್ಲಾನ್ ಇದ್ಯಾ…..? ಹೂರಣ ನೀರಾದ್ರೆ ಇಲ್ಲಿದೆ ಟಿಪ್ಸ್

ಶ್ರಾವಣ ಬಂತು ಎಂದರೆ ಸಾಲು ಸಾಲು ಹಬ್ಬಗಳ ಆಗಮನ. ಅದರಲ್ಲೂ ವರಮಹಾಲಕ್ಷ್ಮಿ ಹಬ್ಬ ಅಂದ್ರೆ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಡಗರ ಸಂಭ್ರಮ. ಇನ್ನು ಒಂದು ತಿಂಗಳು ಇರುವಾಗಲೇ ಹಬ್ಬದ ತಯಾರಿ ಶುರು. ತಾಯಿ ಮಹಾಲಕ್ಷ್ಮಿ ನಮ್ಮ ಮನೆಯಲ್ಲಿ ಬಂದು ಶಾಶ್ವತವಾಗಿ ನೆಲೆಸಬೇಕು ಎಂಬ ಬಯಕೆಯಿಂದ ಅತ್ಯಂತ ಶ್ರದ್ಧಾ ಭಕ್ತಿಯಿಂದ ತಾಯಿಗೆ ಇಷ್ಟವಾಗುವ ಎಲ್ಲಾ ಪದಾರ್ಥಗಳನ್ನ ದೇವರ ಮುಂದೆ ಇಟ್ಟು ಪೂಜಿಸುವುದು ವಾಡಿಕೆ.

ವರಮಹಾಲಕ್ಷ್ಮಿ ಅಂದ್ರೆ ಹೋಳಿಗೆ ಗ್ಯಾರಂಟಿ. ದೇವರಿಗೆ ನೈವೇದ್ಯ ಮಾಡಲು ಹೋಳಿಗೆ ಅತ್ಯಂತ ಶ್ರೇಷ್ಠವಾದ ಸಾಂಪ್ರದಾಯಿಕ ಸಿಹಿ ಖಾದ್ಯಗಳಲ್ಲಿ ಒಂದು. ಬೇಳೆ ಹೋಳಿಗೆ ಎಲ್ಲರಿಗೂ ಸಾಮಾನ್ಯವಾಗಿ ಇಷ್ಟ. ಆದರೆ ಮಿಕ್ಸಿ ಜಾರಿನಲ್ಲಿ ಬೇಳೆಯನ್ನು ರುಬ್ಬಿದಾಗ ಕೆಲವೊಮ್ಮೆ ಹೂರಣ ಹದಗೆಟ್ಟು ನೀರಾಗಬಹುದು. ಆಗ ಹೋಳಿಗೆಯ ರುಚಿ ಕೆಟ್ಟು ಹೋಗಬಹುದು. ಅಥವಾ ಸರಿಯಾದ ಕ್ರಮದಲ್ಲಿ ಹೋಳಿಗೆ ಮಾಡಲು ಸಾಧ್ಯವಾಗದೆ ಹೋಗಬಹುದು.

ಬೇಳೆಯ ಹೂರಣ ತೆಳ್ಳಗಾದರೆ ಅದಕ್ಕೊಂದು ಸುಲಭವಾದ ಉಪಾಯ ಇದೆ. ಹೂರಣವನ್ನು ಬಾಣಲೆಯಲ್ಲಿ ಹಾಕಿ ಮಂದ ಉರಿಯಲ್ಲಿ ಕೆದಕುತ್ತ ಇದ್ದರೆ ಹೂರಣ ಗಟ್ಟಿಯಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಮಧ್ಯ ಕೈಬಿಡಬಾರದು. ಇಲ್ಲದೆ ಹೋದರೆ ಹೂರಣ ಬಹಳ ಬೇಗ ತಳ ಹಿಡಿದು ಸೀದು ಹೋಗಬಹುದು. ದಪ್ಪ ತಳದ ಬಾಣಲೆಯನ್ನು ಉಪಯೋಗಿಸಿ ಮಂದ ಉರಿಯಲ್ಲಿ ಕೈಯಾಡಿಸುತ್ತಾ ಇದ್ದರೆ ನಮಗೆ ಬೇಕಾದ ಹದದಲ್ಲಿ ಹೂರಣ ಸಿದ್ಧವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...