ಕೆಲವೊಮ್ಮೆ ನಿಮ್ಮ ಮನೆಯ ಬಾತ್ ರೂಂ ಅಥವಾ ಅಡುಗೆ ಮನೆಯ ಸಿಂಕ್ ನಿಂದ ದುರ್ವಾಸನೆ ಹೊರಹೊಮ್ಮುತ್ತಿರಬಹುದು. ಇದಕ್ಕೆ ಮುಖ್ಯ ಕಾರಣ ಅದರ ಪೈಪ್ ನೊಳಗೆ ಬೆಳೆಯುವ ಬ್ಯಾಕ್ಟೀರಿಯಾ. ಇದನ್ನು ಸ್ವಚ್ಛಗೊಳಿಸಲು ಒಂದಿಷ್ಟು ಟಿಪ್ಸ್.
ಈ ವಾಸನೆಯನ್ನು ದೂರಮಾಡಲು ರಾತ್ರಿ ಎಲ್ಲಾ ಪಾತ್ರೆಗಳನ್ನು ತೊಳೆದಾದ ಬಳಿಕ ಬಿಸಿಯಾದ ನೀರನ್ನು ಸಿಂಕ್ ಮೇಲೆ ಸುರಿಯಿರಿ. ಇದರಿಂದ ಪೈಪ್ ಗೆ ಅಂಟಿದ ಜಿಡ್ಡಿನ ವಸ್ತುಗಳೆಲ್ಲಾ ತೊಳೆದು ಹೋಗುತ್ತವೆ. ವಾಸನೆ ಉಂಟು ಮಾಡುವ ಎಲ್ಲಾ ವಸ್ತುಗಳು ದೂರವಾಗುತ್ತವೆ.
ಅಡುಗೆ ಸೋಡಾ, ವಿನೆಗರ್ ಮತ್ತು ಕುದಿಯುವ ನೀರನ್ನು ಮಿಶ್ರ ಮಾಡಿ ಹಾಕುವುದುರಿಂದ ಕೊಳೆ ಸಮೇತ ವಾಸನೆ ದೂರವಾಗುತ್ತದೆ. ನಾರುವ ಚರಂಡಿ ಸಮಸ್ಯೆಯಿಂದ ಮುಕ್ತಿ ಪಡೆಯಲೂ ಇದನ್ನು ಬಳಸುತ್ತಾರೆ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಯಾವ ವಾಸನೆಯೂ ಬಾರದು.
ಸಿಂಕ್ ನಲ್ಲಿ ಕೂದಲು ಸಿಕ್ಕಿಹಾಕಿಕೊಂಡಿದೆಯೇ ಪರಿಶೀಲಿಸಿ. ಅದು ಇತರ ಪದಾರ್ಥಗಳನ್ನು ಹಿಡಿದಿಟ್ಟುಕೊಂಡು ವಾಸನೆಗೆ ಕಾರಣವಾಗುವುದುಂಟು. ಹಾಗಾಗಿ ಯಾವುದೇ ರಾಸಾಯನಿಕಗಳನ್ನು ಬಳಸದೆಯೇ ನಿಮ್ಮ ಸಿಂಕ್ ಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ.