ಪ್ರತಿಯೊಬ್ಬರ ದೇಹ ಕೂಡ ಎಲ್ಲಾ ಋತುವಿನಲ್ಲೂ ಬಿಸಿಯಾಗಿರುತ್ತದೆ. ಅಂದರೆ ಬೆಚ್ಚಗಿರುತ್ತದೆ, ಜ್ವರದಿಂದ ಬಳಲುತ್ತಿದ್ದರೆ ವಿಪರೀತ ಬಿಸಿಯಾಗುತ್ತದೆ. ಆದರೆ ಕೆಲವರ ದೇಹ ಮಾತ್ರ ಸದಾಕಾಲ ಹೆಚ್ಚು ಬಿಸಿ ಇರುತ್ತದೆ. ಅದನ್ನು ಸಾಮಾನ್ಯವೆಂದು ಪರಿಗಣಿಸಿದರೆ ದೊಡ್ಡ ಸಮಸ್ಯೆಯನ್ನು ನಿರ್ಲಕ್ಷಿಸಿದಂತೆ.
ಬೇಸಿಗೆಯಲ್ಲಿ ದೀರ್ಘಕಾಲದವರೆಗೆ ಬಿಸಿಲಿನಲ್ಲಿದ್ದರೆ ಸಹಜವಾಗಿಯೇ ದೇಹ ಕೂಡ ಬಿಸಿಯಾಗುತ್ತದೆ. ಆದರೆ ಕೆಲವರ ದೇಹ ವಿಪರೀತವಾಗಿ ಬಿಸಿಯಾಗುತ್ತದೆ, ಈ ಸ್ಥಿತಿಯನ್ನು ಹೈಪೋಥರ್ಮಿಯಾ ಎಂದೂ ಕರೆಯುತ್ತಾರೆ, ಆದರೆ ಇದು ಜ್ವರವಲ್ಲ.
ಥೈರಾಯ್ಡ್ ಮಟ್ಟ ಹೆಚ್ಚಿರುವವರ ದೇಹ ಕೂಡ ಸ್ವಲ್ಪ ಬಿಸಿಯಾಗಿರುತ್ತದೆ. ಇದರ ಜೊತೆಗೆ ಬೆವರು, ಅತಿಸಾರ ಮತ್ತು ಭಯವಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ವೈದ್ಯರ ಬಳಿಗೆ ಹೋಗಬೇಕು. ದೇಹದಲ್ಲಿ T3 ಮತ್ತು T4 ಹೆಚ್ಚಳದಿಂದಾಗಿ ತಾಪಮಾನ ಹೆಚ್ಚಾಗಬಹುದು.
ಚಿಕ್ಕ ಮಕ್ಕಳು ಹಾಗೂ ವಯಸ್ಸಾದವರಲ್ಲಿ ಕೂಡ ಈ ಸಮಸ್ಯೆ ಬರಬಹುದು. ಶಾಲಾ ಮಕ್ಕಳು ಬಿಸಿಲಿನಲ್ಲಿ ಆಟವಾಡುತ್ತಾರೆ, ಅಂತೆಯೇ ವಯಸ್ಸಾದವರಲ್ಲಿ ಕಡಿಮೆ ರೋಗನಿರೋಧಕ ಶಕ್ತಿಯಿಂದಾಗಿ ದೇಹದ ತಾಪಮಾನವು ಹೆಚ್ಚಾಗಬಹುದು ಮತ್ತು ಕಡಿಮೆಯಾಗಬಹುದು.
ದೇಹದ ತಾಪಮಾನವು ಇದ್ದಕ್ಕಿದ್ದಂತೆ ಹೆಚ್ಚಾಗಲು ಪ್ರಾರಂಭಿಸಿದರೆ ಅದು ಕೆಲವು ಸೋಂಕಿನ ಸಂಕೇತವೂ ಆಗಿರಬಹುದು. ಎದೆ ಅಥವಾ ಹೊಟ್ಟೆಯ ಸೋಂಕಿದ್ದರೆ ಸೌಮ್ಯವಾದ ಜ್ವರ ಕೂಡ ಬರುತ್ತದೆ. ಯಾವುದೇ ಒಂದು ನಿರ್ದಿಷ್ಟ ಅಂಗದ ಉಷ್ಣತೆ ಹೆಚ್ಚಾಗುತ್ತಿದ್ದರೆ ಅಲ್ಲಿ ಸೋಂಕಿದೆ ಎಂಬ ಸಂಕೇತ ಅದು. ಹಾಗಾಗಿ ಶೀಘ್ರದಲ್ಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.