ಸ್ವಿಮ್ಮಿಂಗ್ ಬಗ್ಗೆ ಅನೇಕರಿಗೆ ಆಸಕ್ತಿಯಿದೆ. ಈಜುಕೊಳದ ಹೆಸರು ಕೇಳಿದ್ರೇನೆ ಜನರು ಉತ್ಸುಕರಾಗುತ್ತಾರೆ. ಬೇಸಿಗೆ ಕಾಲದಲ್ಲಿ ಸ್ವಿಮ್ಮಿಂಗ್ ಪೂಲ್ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬಿಸಿಲಿನ ತಾಪದಿಂದ ಉಪಶಮನ ಪಡೆಯಲು ಮಾತ್ರವಲ್ಲದೆ ಈಜುಕೊಳ ಮನರಂಜನೆಯ ತಾಣವೂ ಹೌದು. ಆದರೆ ಮಳೆಗಾಲದಲ್ಲಿ ಈಜುಕೊಳದಲ್ಲಿ ಸ್ನಾನ ಮಾಡುವುದು ಅಥವಾ ಸ್ವಿಮ್ಮಿಂಗ್ ಸೂಕ್ತವೇ ಎಂಬುದನ್ನು ತಿಳಿದುಕೊಳ್ಳಬೇಕು.
ಮಳೆಗಾಲದಲ್ಲಿ ಈಜುಕೊಳದಲ್ಲಿ ಸ್ನಾನ ಮಾಡುವ ಬಗ್ಗೆ ಅನೇಕ ತಜ್ಞರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಏಕೆಂದರೆ ಇದರಿಂದ ಅನುಕೂಲ ಮತ್ತು ಅನಾನುಕೂಲ ಎರಡೂ ಇವೆ. ಮಳೆಗಾಲದಲ್ಲಿ ಸ್ವಿಮ್ಮಿಂಗ್ ಪೂಲ್ಗೆ ಹೋಗುವುದರಿಂದ ಸೆಖೆಯ ತಾಪದಿಂದ ಪಾರಾಗಬಹುದು. ಹಾಗೆಯೇ ಕೊಳದಲ್ಲಿ ಸ್ನಾನ ಮಾಡುವುದರಿಂದ ಒತ್ತಡವನ್ನು ನಿವಾರಿಸಬಹುದು. ಆದರೆ ಮಳೆಗಾಲದಲ್ಲಿ ನೀರಿಗಿಳಿಯುವ ಮುನ್ನ ಕೆಲವೊಂದು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
ಈಜುಕೊಳದ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಿದರೆ ಸ್ನಾನ ಮಾಡುವುದು ಸುರಕ್ಷಿತ. ಕೆಲವೊಮ್ಮೆ ಸಮುದಾಯದ ಈಜುಕೊಳಗಳು ಕಲುಷಿತವಾಗುತ್ತವೆ. ಅದರಲ್ಲಿ ಈಜಿದರೆ ಆರೋಗ್ಯಕ್ಕೆ ಸಮಸ್ಯೆ ಆಗಬಹುದು. ಯಾಕೆಂದರೆ ಹರಿಯುವ ನೀರು ನಿಂತ ನೀರಿಗಿಂತ ಸುರಕ್ಷಿತ. ಸ್ವಿಮ್ಮಿಂಗ್ ಪೂಲ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಜೊತೆಗೆ ರೋಗಾಣುಗಳನ್ನು ಕೊಲ್ಲಲು ಕ್ಲೋರಿನ್ ಮಾತ್ರೆಗಳನ್ನು ಹಾಕಬೇಕು, ಆಗ ಮಾತ್ರ ಕೊಳದಲ್ಲಿ ಸ್ನಾನ ಮಾಡುವುದು ಸುರಕ್ಷಿತವಾಗಿರುತ್ತದೆ.
ಹೆಚ್ಚು ಜನಸಂದಣಿ ಇರುವ ಇಂತಹ ಈಜುಕೊಳ, ವಾಟರ್ ಪಾರ್ಕ್ಗಳಿಗೆ ಹೋಗಬೇಡಿ. ಏಕೆಂದರೆ ಅನೇಕ ಜನರು ಅದನ್ನು ಬಳಸುತ್ತಾರೆ. ಜನರ ದೇಹದ ಕೊಳೆಯಿಂದ ನೀರು ಕಲುಷಿತಗೊಳ್ಳುತ್ತದೆ, ಇದರಿಂದ ರೋಗಗಳ ಅಪಾಯ ಹೆಚ್ಚಾಗುವುದು ಖಚಿತ.