ಭಾನುವಾರ ನಡೆದ ಮನೀಶ್ ಮಲ್ಹೋತ್ರಾ ಅವರ ದೀಪಾವಳಿ ಪಾರ್ಟಿಯಲ್ಲಿ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಸೇರಿದಂತೆ ಹಲವು ಸೆಲೆಬ್ರೆಟಿಗಳು ಭಾಗವಹಿಸಿದ್ದರು. ಅಭಿಮಾನಿಗಳಿಗೆ ರೆಡ್ ಕಾರ್ಪೆಟ್ ಲುಕ್ ನೀಡಿ ಸತ್ಕರಿಸಿದರೂ ಮನೀಷ್ ಪಾರ್ಟಿಯನ್ನು ಕ್ಯಾಮರಾಗಳಿಂದ ದೂರವಿಟ್ಟರು.
ಈ ನಡುವೆ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ಸಲ್ಮಾನ್ ಖಾನ್ ಅವರನ್ನು ಐಶ್ವರ್ಯಾ ರೈ ತಬ್ಬಿಕೊಂಡಂತೆ ಕಂಡುಬಂದಿದೆ. ಇದು ನಿಜಕ್ಕೂ ಹೌದೇ? ಈ ವಿಡಿಯೋದ ವೈರಲ್ ಸತ್ಯಾಸತ್ಯತೆ ಏನು ಇಲ್ಲಿದೆ ಮಾಹಿತಿ.
ದೀಪಾವಳಿ ಪಾರ್ಟಿಯಲ್ಲಿ ಐಶ್ವರ್ಯಾ ರೈ ಅವರು ಕೆಂಪು ಬಣ್ಣದ ಉಡುಪನ್ನು ಧರಿಸಿದ್ದರು. ಸಲ್ಮಾನ್ ಪಾರ್ಟಿಯಿಂದ ಹೊರಬರುತ್ತಿದ್ದ ವೇಳೆ ಕೆಂಪು ಬಣ್ಣದ ಉಡುಗೆ ಧರಿಸಿದ ಮಹಿಳೆಯೊಬ್ಬರು ಸಲ್ಮಾನ್ ಅವರನ್ನು ತಬ್ಬಿಕೊಂಡಿದ್ದಾರೆ.
ನೆಟ್ಟಿಗರು ಐಶ್ವರ್ಯಾ ರೈ ಸಲ್ಮಾನ್ ರನ್ನು ತಬ್ಬಿಕೊಂಡಿದ್ದಾರೆ ಎಂದು ಊಹಿಸಲು ಶುರು ಮಾಡಿದ್ದಾರೆ. ಆದರೆ, ವಿಡಿಯೋದಲ್ಲಿರುವ ಮಹಿಳೆ ಐಶ್ವರ್ಯಾ ರೈ ಅಲ್ಲ, ಅವರು ಸೂರಜ್ ಪಾಂಚೋಲಿ ಸಹೋದರಿ ಸನಾ ಪಂಚೋಲಿ ಎಂದು ಶೀಘ್ರದಲ್ಲೇ ಸ್ಪಷ್ಟಪಡಿಸಲಾಯಿತು.
ಅಂದಹಾಗೆ, 2000 ಇಸವಿಯ ಆರಂಭದಲ್ಲಿ ತಮ್ಮ ಬ್ರೇಕಪ್ ನಂತರ ಇಬ್ಬರೂ ಅಂತರವನ್ನು ಕಾಯ್ದುಕೊಂಡಿದ್ದಾರೆ. ಐಶ್ವರ್ಯಾ ತಮ್ಮ ಸಂಬಂಧದಿಂದ ಹಿಂದೆ ಸರಿದು ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾಗಿದ್ದಾರೆ. ದಂಪತಿ ಆರಾಧ್ಯ ಬಚ್ಚನ್ ಎಂಬ ಪುತ್ರಿಯನ್ನು ಹೊಂದಿದ್ದು, ಸಂತೋಷದ ಜೀವನ ನಡೆಸುತ್ತಿದ್ದಾರೆ. ಐಶ್ವರ್ಯಾ ಮತ್ತು ಸಲ್ಮಾನ್ ಮಾತನಾಡದಿದ್ದರೂ, ಅಭಿಷೇಕ್, ಸಲ್ಮಾನ್ ಜೊತೆಗೆ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ.