ಮೊಬೈಲ್ ಬಳಕೆ ಎಷ್ಟು ಅನುಕೂಲಕರವೋ ಅಷ್ಟೇ ಅಪಾಯಗಳನ್ನೂ ಉಂಟುಮಾಡಬಲ್ಲದು. ಮೊಬೈಲ್ ಫೋನ್‌ಗಳಿಂದ ಹೊರಹೊಮ್ಮುವ ಬೆಳಕು ಮತ್ತು ರೇಡಿಯೇಶನ್‌ಗಳು ಮಾನವನ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಈಗಾಗ್ಲೇ ಸಾಬೀತಾಗಿದೆ. ಇದರಿಂದ ನಿದ್ರಾಹೀನತೆ, ಬಂಜೆತನ, ದೃಷ್ಟಿ ಸಮಸ್ಯೆಗಳು, ಆತಂಕ ಇಂತಹ ಸಾಕಷ್ಟು ಸಮಸ್ಯೆಗಳಾಗಬಹುದು. ಆದ್ರೀಗ ಮೊಬೈಲ್ ಫೋನ್‌ಗಳು ಮೆದುಳಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಹೇಳಲಾಗುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆಯ (WHO) ಹೊಸ ಅಧ್ಯಯನದ ಪ್ರಕಾರ ಮೊಬೈಲ್ ಫೋನ್ ಬಳಕೆ ಮತ್ತು ಮೆದುಳಿನ ಕ್ಯಾನ್ಸರ್ ನಡುವೆ ನೇರ ಸಂಬಂಧವಿಲ್ಲ. WHO ಈ ತೀರ್ಮಾನಕ್ಕೆ ಬರಲು 5,000 ಕ್ಕೂ ಹೆಚ್ಚು ಅಧ್ಯಯನಗಳನ್ನು ವಿಶ್ಲೇಷಿಸಿದೆ. 1994 ಮತ್ತು 2022ರ ನಡುವೆ ಪ್ರಕಟವಾದ 63 ಪ್ರಮುಖ ಅಧ್ಯಯನಗಳನ್ನು ಅಂತಿಮ ವಿಶ್ಲೇಷಣೆಗಾಗಿ ಆಯ್ಕೆ ಮಾಡಲಾಗಿದೆ.
ವಿಶ್ಲೇಷಣೆಯ ಪ್ರಕಾರ ಕಳೆದ ಎರಡು ದಶಕಗಳಲ್ಲಿ ವೈರ್‌ಲೆಸ್ ತಂತ್ರಜ್ಞಾನದ ತ್ವರಿತ ಬೆಳವಣಿಗೆಯ ಹೊರತಾಗಿಯೂ ಮೆದುಳಿನ ಕ್ಯಾನ್ಸರ್ ಸಾಧ್ಯತೆಗಳಲ್ಲಿ ಯಾವುದೇ ಗಮನಾರ್ಹ ಏರಿಕೆ ಕಂಡುಬಂದಿಲ್ಲ. ಆದರೆ WHOನ IARC ವೈರ್‌ಲೆಸ್ ಫೋನ್ ಬಳಕೆಯನ್ನು ಗ್ಲಿಯೋಮಾ ಎಂಬ ಮಾರಣಾಂತಿಕ ರೀತಿಯ ಮೆದುಳಿನ ಕ್ಯಾನ್ಸರ್‌ಗೆ ಸಂಭವನೀಯ ಅಪಾಯಕಾರಿ ಅಂಶವೆಂದು ವರ್ಗೀಕರಿಸಿದೆ. ಈ ಅಧ್ಯಯನವು ಹೆಚ್ಚು ಸಮಗ್ರವಾದ ಡೇಟಾವನ್ನು ಆಧರಿಸಿದೆ. ಆದರೆ ಈ ಬಗ್ಗೆ ಇನ್ನಷ್ಟು ಪುರಾವೆಗಳ ಅಗತ್ಯವಿದೆ ಎಂದು ಹೇಳಲಾಗುತ್ತಿದೆ. ಇದು ಮೊಬೈಲ್ ಫೋನ್ ಬಳಕೆಯಿಂದ ಮೆದುಳಿನ ಕ್ಯಾನ್ಸರ್ ಅಪಾಯ ಇನ್ನಷ್ಟು ಹೆಚ್ಚಾಗುತ್ತದೆ ಎಂಬುದು ಸಂಪೂರ್ಣ ದೃಢಪಟ್ಟಿಲ್ಲ. ಆದರೆ ಅತಿಯಾದ ಬಳಕೆ ಆರೋಗ್ಯಕ್ಕೆ ಅಪಾಯಕಾರಿ ಎಂಬುದಂತೂ ಖಚಿತ.