alex Certify ಪಾದಗಳಲ್ಲಿ ತುರಿಕೆ ಸಮಸ್ಯೆನಾ…..? ಅಡುಗೆ ಮನೆಯಲ್ಲೇ ಇದೆ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾದಗಳಲ್ಲಿ ತುರಿಕೆ ಸಮಸ್ಯೆನಾ…..? ಅಡುಗೆ ಮನೆಯಲ್ಲೇ ಇದೆ ಮದ್ದು

ಸಾಮಾನ್ಯವಾಗಿ ಬೇಸಿಗೆಯಲ್ಲಿ ಪಾದಗಳು ಬೆವರುತ್ತವೆ. ಹಾಗಾಗಿಯೇ ಕೆಲವರು ಸದಾ ಸಾಕ್ಸ್‌ ಧರಿಸುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದರಿಂದ ಪಾದಗಳ ಅಡಿಭಾಗದಲ್ಲಿ ತೀವ್ರ ತುರಿಕೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ತುರಿಕೆ ಸಮಸ್ಯಯಿಂದ ಕೆಲವೊಮ್ಮೆ ಮಳೆಗಾಲದಲ್ಲೂ ಈ ಸಮಸ್ಯೆಯಿಂದ ಮುಜುಗರಕ್ಕೀಡಾಗುವ ಸಂದರ್ಭವೂ ಬರಬಹುದು. ಹಾಗಾಗಿ ಇದಕ್ಕೆ ಸುಲಭ ಪರಿಹಾರವನ್ನು ಕಂಡುಕೊಳ್ಳೋಣ.

ಪಾದಗಳಲ್ಲಿ ತುರಿಕೆ ಬರುವುದೇಕೆ?

ಪಾದಗಳಲ್ಲಿ ತುರಿಕೆ ಬರುವುದಕ್ಕೆ ಅನೇಕ ಕಾರಣಗಳಿವೆ. ಪಾದಗಳಲ್ಲಿ ರಕ್ತಸಂಚಾರ ಹೆಚ್ಚಾಗುವುದು, ದೇಹದಲ್ಲಿ ನೀರಿನ ಕೊರತೆ, ಅಲರ್ಜಿ ಮತ್ತು ಮಧುಮೇಹ ಕೂಡ ಇಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಅನೇಕ ಬಾರಿ ನಾವು ಬೂಟು ಅಥವಾ ಸಾಕ್ಸ್ ಅನ್ನು ದೀರ್ಘಕಾಲದವರೆಗೆ ಧರಿಸುತ್ತೇವೆ. ಇದರಿಂದಾಗಿ ಪಾದಗಳಲ್ಲಿ ಬಹಳಷ್ಟು ಬೆವರು ಹೊರಬರುತ್ತದೆ ಮತ್ತು ತುರಿಕೆಗೆ ಕಾರಣವಾಗುತ್ತದೆ.

ಆಪಲ್ ಸೈಡರ್ ವಿನೆಗರ್

ಪಾದಗಳಲ್ಲಿ ತೀವ್ರವಾದ ತುರಿಕೆ ಇದ್ದಾಗ ಆಪಲ್ ಸೈಡರ್ ವಿನೆಗರ್ ಅನ್ನು ಕುಡಿಯಿರಿ. ಅದರಲ್ಲಿರುವ ಎಂಟಿಫಂಗಲ್ ಮತ್ತು ಎಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳು ತುರಿಕೆಯನ್ನು ಹೋಗಲಾಡಿಸುತ್ತವೆ. ಇದು ಸೋಂಕನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸುಗಮಗೊಳಿಸುತ್ತದೆ.

ಉಪ್ಪು ನೀರು

ನೀರಿನಲ್ಲಿ ಕಲ್ಲು ಉಪ್ಪನ್ನು ಬೆರೆಸಿ ಕುಡಿಯುವುದರಿಂದ ಪಾದಗಳ ಅಡಿಭಾಗದಲ್ಲಿ ತುರಿಕೆ ಕಡಿಮೆಯಾಗುತ್ತದೆ. ಏಕೆಂದರೆ ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದೆ, ಇದು ರಕ್ತ ಪರಿಚಲನೆಯನ್ನು ಹತೋಟಿಯಲ್ಲಿಡುತ್ತದೆ ಮತ್ತು ಪಾದಗಳಲ್ಲಿನ ಉರಿಯನ್ನು ಹೋಗಲಾಡಿಸುತ್ತದೆ.

ಮೊಸರು

ಮೊಸರು ಸೇವನೆ ಮಾಡಿದರೆ ಪಾದಗಳ ತುರಿಕೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಏಕೆಂದರೆ ಇದು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಪಾದಗಳಲ್ಲಿನ ಸೋಂಕನ್ನು ಕಡಿಮೆ ಮಾಡುತ್ತದೆ. ಮೊಸರಿನ ಪರಿಣಾಮ ತಣ್ಣಗಿರುವುದರಿಂದ ಇದರ ಬಳಕೆ ದೇಹದ ಎಲ್ಲಾ ಭಾಗಗಳಿಗೂ ತಂಪು ಉಂಟುಮಾಡುತ್ತದೆ. ಪಾದಗಳ ತುರಿಕೆಯಿಂದಲೂ ಮುಕ್ತಿ ಸಿಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...