ಬೆಂಗಳೂರು : ಕುರಿ ಕಾಯುವವರ ಮಗ ರಾಜ್ಯದ ಮುಖ್ಯಮಂತ್ರಿ ಆಗಿರುವುದು ತಪ್ಪಾ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.ಕುರಿ ಕಾಯುವವರ ಮಗ ಎರಡನೇ ಬಾರಿ ಈ ರಾಜ್ಯದ ಮುಖ್ಯಮಂತ್ರಿ ಆಗಿರುವುದು ತಪ್ಪಾ? ಸಮಾಜದ ಬಡವರು, ಶೋಷಿತರು, ಅವಕಾಶ ವಂಚಿತ ಜನರ ಪರವಾಗಿ ಯೋಜನೆಗಳನ್ನು ರೂಪಿಸಿದ್ದು ತಪ್ಪಾ? ಈ ಜನರ ಧ್ವನಿಯಾಗಿ ಕೋಮುವಾದ, ದ್ವೇಷ ರಾಜಕೀಯದ ವಿರುದ್ಧ ಮಾತನಾಡುತ್ತಿರುವುದು ತಪ್ಪಾ? ರಾಜಕೀಯದ ಕಡೆ ಮುಖ ಮಾಡದ ನನ್ನ ಪತ್ನಿಯ ಹೆಸರನ್ನು ತಮ್ಮ ಸ್ವಾರ್ಥ ಸಾಧನೆಗಾಗಿ ಎಳೆದು ತಂದಿದ್ದಾರೆ. ಆಕೆ ಯಾವ ತಪ್ಪು ಮಾಡಿದ್ದಾಳೆ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬಿಜೆಪಿಯವರು ಹಿಂದುಳಿದ ಸಮುದಾಯಗಳ, ಬಡಜನರ, ಅಲ್ಪಸಂಖ್ಯಾತರ ವಿರೋಧಿಗಳು. ಬಡವರ ಪರವಾದ ಕಾರ್ಯಕ್ರಮಗಳನ್ನು ರೂಪಿಸಿದ ಕಾರಣಕ್ಕೆ ನನ್ನನ್ನು ಅಧಿಕಾರದಿಂದ ಇಳಿಸಬೇಕು ಎಂದು ನಿರ್ಧರಿಸಿ, ವಿನಾಃಕಾರಣ ನಿತ್ಯ ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ನನಗೂ ಈ ರಾಜಕೀಯ ಷಡ್ಯಂತ್ರಗಳಿಂದ ಬೇಸರವಾಗಿದೆ. ಆದರೂ ನಾನು ಜನರಿಗಾಗಿ ನನ್ನ ಹೋರಾಟವನ್ನು ಮುಂದುವರೆಸುತ್ತೇನೆ. ಬಿಜೆಪಿ- ಜೆಡಿಎಸ್ ನಾಯಕರ ಸ್ವಾರ್ಥಕ್ಕಾಗಿ ರಾಜೀನಾಮೆ ನೀಡುವುದಿಲ್ಲ ಎಂದಿದ್ದಾರೆ.