ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಪಾಕಿಸ್ತಾನ ರಾಷ್ಟ್ರೀಯ ಸಭೆಯ ಸದಸ್ಯ ಆಮಿರ್ ಲಿಯಾಕತ್ ಹುಸೇನ್ ಬಾಲಿವುಡ್‌ನ ’ಟಿಪ್ ಟಿಪ್ ಬರ್ಸಾ ಪಾನಿ’ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ ಎನ್ನಲಾಗಿದೆ.
ಸಮಾರಂಭವೊಂದರಲ್ಲಿ ಬಾಲಿವುಡ್ ಹಾಡಿಗೆ ವ್ಯಕ್ತಿಯೊಬ್ಬರು ಹೆಜ್ಜೆ ಹಾಕುತ್ತಿರುವುದನ್ನು ವಿಡಿಯೋ ತೋರುತ್ತಿದೆ. ಆದರೆ ಆತ ರಾಜಕೀಯ ನೇತಾರನಲ್ಲ ಎಂದು ಕೆಲವರು ಹೇಳುತ್ತಾರೆ. ಹಾಡಿಗೆ ತಕ್ಕಂತೆ ಸ್ಟೆಪ್ ಹಾಕುತ್ತಿರುವ ಈ ವ್ಯಕ್ತಿಗೆ ಚಿಯರ್ ಮಾಡುತ್ತಿರುವ ಅತಿಥಿಗಳನ್ನು ಸಹ ವಿಡಿಯೋದಲ್ಲಿ ನೋಡಬಹುದಾಗಿದೆ.
ಹೀಗಿತ್ತು ದ.ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಗೆದ್ದ ಟೀಂ ಇಂಡಿಯಾ ಆಟಗಾರರ ಸಂಭ್ರಮ
ಆದರೆ ವಿಡಿಯೋದಲ್ಲಿರುವುದು ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಆಮೀರ್ ಲಿಯಾಕರ್ ಹುಸೇನ್ ಎಂದು ಅನೇಕ ವರದಿಗಳು ತಿಳಿಸುತ್ತಿವೆ. ಇಲ್ಲಿರುವ ವ್ಯಕ್ತಿ ಯಾರು ಎಂಬುದು ಟ್ವಿಟರ್‌ನಲ್ಲಿ ಬಲೇ ಮಜವಾದ ಸಂವಹನವೊಂದಕ್ಕೆ ದಾರಿ ಮಾಡಿಕೊಟ್ಟಿದೆ.
https://twitter.com/taimoorze/status/1478698738596163587?ref_src=twsrc%5Etfw%7Ctwcamp%5Etweetembed%7Ctwterm%5E1478698738596163587%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-fact-check-man-dancing-tip-tip-barsa-paani-pakistani-mp-aamir-liaquat-hussain-5173911%2F