
ಟ್ವಿಟ್ಟರ್ ನಲ್ಲಿ ಥ್ರೋ ಬ್ಯಾಕ್ ಫೋಟೋವನ್ನು ಹಂಚಿಕೊಂಡ ಅವರು, ಎಂ ಮತ್ತು ಎ ಎಂಬ ಮೊದಲಕ್ಷರಗಳನ್ನು ಹೊರತುಪಡಿಸಿ ಯಾವುದೇ ಸುಳಿವು ನೀಡಲಿಲ್ಲ. ಈ ಪೋಸ್ಟ್ ವೈರಲ್ ಆಗಿದ್ದು, ಕಪ್ಪು-ಬಿಳುಪು ಫೋಟೋದಲ್ಲಿ ಇಬ್ಬರು ಬಾಲಕರು ಸೂಟ್‌ಗಳನ್ನು ಧರಿಸಿ ಕುತ್ತಿಗೆಗೆ ಹಾರವನ್ನು ಹಾಕಿದ್ದಾರೆ. ಇಬ್ಬರು ಸಹೋದರರು ತಮ್ಮ ಆರಂಭಿಕ ದಿನಗಳಲ್ಲಿ, ಎಂ & ಎ ಎಂದು ಹರ್ಷ್ ಗೋಯೆಂಕಾ ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
ಈ ಚಾಲೆಂಜ್‌ಗೆ ನೆಟ್ಟಿಗರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಥ್ರೋಬ್ಯಾಕ್ ಚಿತ್ರವು ಉದ್ಯಮಿಯದೇ ಎಂದು ಕೆಲವರು ಭಾವಿಸಿದರೆ, ಇತರರು ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಅವರು ಮಕ್ಕಳಾಗಿದ್ದಾಗಿನ ಫೋಟೋ ಇದು ಎಂದು ಪ್ರತಿಕ್ರಿಯಿಸಿದ್ದಾರೆ.
ಮುಖೇಶ್ ಮತ್ತು ಅನಿಲ್ ಅಂಬಾನಿಯವರ ಮೊದಲ ವಿದೇಶಿ ಪ್ರವಾಸದ ಫೋಟೋ ಇದಾಗಿದೆ. ಹಾಗೂ ಇದು ಮತ್ತು ಅವರ ತಾಯಿ ಕೋಕಿಲಾಬೆನ್ ಅಂಬಾನಿ ಅವರ ಫೋಟೋ ಸಂಗ್ರಹದ ಭಾಗವಾಗಿದೆ ಎಂದು ಟ್ವಿಟ್ಟರ್ ಬಳಕೆದಾರರು ಹೇಳಿದ್ದಾರೆ. ನೀವು ಕೂಡಾ ಇದನ್ನು ಸರಿ ಅಂತೀರಾ ? ಹಾಗಾದ್ರೆ ಕೆಳಗೆ ಕಮೆಂಟ್ ಮಾಡಿ.
ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕ ದಿವಂಗತ ಉದ್ಯಮಿ ಧೀರೂಭಾಯಿ ಅಂಬಾನಿ ಅವರ ಪುತ್ರರು.