ಹೊರಗಡೆ ಸೂರ್ಯನ ಬಿಸಿಲಿನ ತಾಪ ಹೆಚ್ಚಾಗಿಯೇ ಇದೆ. ಹಾಗಾಗಿ ಜನರು ಮನೆಯೊಳಗೆ ಎಸಿಯಲ್ಲಿ ಇರಲು ಬಯಸುತ್ತಾರೆ. ಇದು ನಿಮ್ಮನ್ನು ತಂಪಾಗಿಸುತ್ತದೆ ನಿಜ. ಆದರೆ ಒಮ್ಮೆಲೆ ನೀವು ಎಸಿಯಿಂದ ಸುಡುವ ಬಿಸಿಲಿಗೆ ಬಂದರೆ ನಿಮ್ಮ ದೇಹಕ್ಕೆ ಗಂಭೀರ ಹಾನಿಯುಂಟಾಗುತ್ತದೆಯಂತೆ.
ಹೌದು. ನೀವು ಎಸಿಯಿಂದ ತಕ್ಷಣ ಹೊರಗೆ ಬಂದಾಗ ಸೂರ್ಯನ ಬಿಸಿಲಿಗೆ ದೇಹದ ಉಷ್ಣತೆಯಲ್ಲಿ ಬದಲಾವಣೆಯಾಗುತ್ತದೆ. ಇದರಿಂದ ದೇಹದ ಒತ್ತಡ ಹೆಚ್ಚಾಗಿ ದೇಹದ ರಕ್ತನಾಳಗಳಲ್ಲಿ ಸಮಸ್ಯೆಯಾಗಬಹುದು. ಹಾಗೇ ರಕ್ತದೊತ್ತಡ ಹೆಚ್ಚಾಗುತ್ತದೆ. ಇದರಿಂದ ಮೆದುಳಿನಲ್ಲಿ ರಕ್ತನಾಳಗಳು ಒಡೆದು ರಕ್ತಸ್ರಾವವಾಗಬಹುದಂತೆ.
ಸಾಮಾನ್ಯವಾಗಿ ಅಧಿಕ ರಕ್ತದೊತ್ತಡ, ಹೃದಯದ ಸಮಸ್ಯೆ, ರಕ್ತನಾಳಗಳಲ್ಲಿ ಅಡಚಣೆ, ಪಿತ್ತಜನಕಾಂಗದ ಕಾಯಿಲೆ ಮತ್ತು ಮೆದುಳಿನಲ್ಲಿ ಗಡ್ಡೆಯ ಸಮಸ್ಯೆ ಮೆದುಳಿನ ರಕ್ತಸ್ರಾವಕ್ಕೆ ಕಾರಣವಾಗುತ್ತವೆ. ಹಾಗಾಗಿ ಈ ಸಮಸ್ಯೆ ಇರುವವರು ಎಸಿಯಿಂದ ಬಿಸಿಲಿಗೆ ಬಂದರೆ ಆಗ ಮೆದುಳಿನಲ್ಲಿ ರಕ್ತಸ್ರಾವವಾಗಿ ಜೀವಕ್ಕೆ ಅಪಾಯವಾಗಬಹುದಂತೆ.
ಹಾಗಾಗಿ ಎಸಿಯಿಂದ ನೇರವಾಗಿ ಬಿಸಿಲಿಗೆ ಬರುವಾಗ ಸ್ವಲ್ಪ ಹೊತ್ತು ನೆರಳಲ್ಲಿ ಕುಳಿತು ನಿಧಾನವಾಗಿ ಹೊರಗೆ ಬನ್ನಿ. ಇನ್ನು ಕೊಡೆ ಏನಾದರೂ ಹಿಡಿದುಕೊಂಡು ಹೊರಗೆ ಬಂದರೆ ಕೂಡ ಒಳ್ಳೆಯದು.