ರೈತರಿಗಾಗಿ ಹಮ್ಮಿಕೊಳ್ಳಲಾಗಿದ್ದ ‘ಕಿಸಾನ್ ಸಮಾಗಮ’ ಸಭೆಯಲ್ಲಿ ಮಾತನಾಡುವ ವೇಳೆ ಅಧಿಕಾರಿಗಳು ಬಹುತೇಕ ಇಂಗ್ಲಿಷ್ ಉಪಯೋಗಿಸಿದ್ದಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗರಂ ಆಗಿದ್ದಾರೆ. ನೀವೇನು ಇಂಗ್ಲೆಂಡ್ ನಲ್ಲಿ ಇದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಪಾಟ್ನಾದ ಬಾಪೂ ಆಡಿಟೋರಿಯಂ ನಲ್ಲಿ ಈ ಸಭೆಯನ್ನು ಆಯೋಜಿಸಲಾಗಿದ್ದು, ಇದರಲ್ಲಿ ಪಾಲ್ಗೊಂಡಿದ್ದ ಬಹುತೇಕ ಅಧಿಕಾರಿಗಳು ತಮ್ಮ ಭಾಷಣದ ಉದ್ದಕ್ಕೂ ಬಹುತೇಕ ಇಂಗ್ಲಿಷ್ ಅನ್ನೇ ಬಳಸಿದ್ದಾರೆ.
ಇದಕ್ಕೆ ಗರಂ ಆದ ಮುಖ್ಯಮಂತ್ರಿಗಳು, ಸ್ಥಳೀಯ ಭಾಷೆಯನ್ನು ಬಳಸಲು ನಿಮಗೆ ಸಮಸ್ಯೆ ಏನು ಎಂದು ಪ್ರಶ್ನಿಸಿದ್ದಾರೆ. ಸ್ಥಳೀಯ ಭಾಷೆಯಲ್ಲಿ ಮಾತನಾಡಿದ ಮಾತ್ರಕ್ಕೆ ಸಂವಹನ ಸಾಧ್ಯ ಎಂದು ಅವರು ಹೇಳಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಬಿಹಾರ ಸಿಎಂ ಮಾತಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.