ಬೆಳಿಗ್ಗೆ ಬೇಗ ಏಳಬೇಕು ಎಂದುಕೊಂಡರೂ ಸಾಧ್ಯವಾಗುತ್ತಿಲ್ಲವೇ? ಹಾಗಿದ್ದರೆ ಈ ಟಿಪ್ಸ್ ಗಳನ್ನು ಅನುಸರಿಸಿ.
ಅಲರಾಂ ಅನ್ನು ಕೈಗೆ ಸಿಗುವಷ್ಟು ಹತ್ತಿರ ಇಟ್ಟುಕೊಳ್ಳದಿರಿ. ಕೈಗೆ ಸಿಗುವಂತಿದ್ದರೆ ನೀವು ಅದನ್ನು ಆಫ್ ಮಾಡಿ ಮತ್ತೆ ನಿದ್ದೆಗೆ ಜಾರುವ ಸಾಧ್ಯತೆ ಇರುತ್ತದೆ. ಹಾಗಾಗಿ ಅಲರಾಂ ಎದ್ದು ಆಫ್ ಮಾಡುವಂತಿರಲಿ.
ಅಲರಾಂ ಪ್ರತಿ ಹತ್ತು ನಿಮಿಷಗಳಿಗೊಮ್ಮೆ ಮತ್ತೆ ಮತ್ತೆ ಹೊಡೆದುಕೊಳ್ಳುವಂತೆ ಸೆಟ್ ಮಾಡಿ. ಅದರ ದನಿಯೂ ಗಟ್ಟಿಯಾಗಿರಲಿ. ಮೊಬೈಲ್ ನಲ್ಲಾದರೆ ದೊಡ್ಡ ದನಿಯ ರಿಂಗ್ ಟೋನ್ ಸೆಟ್ ಮಾಡಿ.
ಎಚ್ಚರವಾದ ಬಳಿಕವೂ ಮಲಗುವ ಗೋಜಿಗೆ ಹೋಗದಿರಿ. ನಿಮ್ಮ ಕೆಲಸವನ್ನು, ಜವಾಬ್ದಾರಿಯನ್ನು ನೆನಪಿಟ್ಟುಕೊಳ್ಳಿ. ನಿತ್ಯ ಬೇಗ ಏಳುವ ಅಭ್ಯಾಸ ರೂಢಿಸಿಕೊಳ್ಳಿ. ಇದು ಆರೋಗ್ಯಕ್ಕೂ ಒಳ್ಳೆಯದು. ನಿಮ್ಮ ದೇಹವನ್ನು ಫಿಟ್ ಆಗಿಡಲು ಇದು ನೆರವಾಗುತ್ತದೆ.