ಪದೇಪದೇ ಮುಖ ತೊಳೆಯುವುದರಿಂದ ತ್ವಚೆಗೆ ಅಂಟಿಕೊಂಡಿರುವ ಧೂಳು ಕೊಳೆ ದೂರವಾಗುತ್ತದೆ ಹಾಗೂ ನಿಮ್ಮ ತ್ವಚೆ ಮೊಡವೆ ಮುಕ್ತ ವಾಗುತ್ತದೆ ಎಂಬುದು ನಿಮಗೆ ತಿಳಿದ ಸಂಗತಿಯೇ. ಅದಕ್ಕೂ ಹೊರತಾಗಿ ತಣ್ಣೀರಿನಿಂದ ಮುಖ ತೊಳೆಯುವುದರಿಂದ ಇನ್ನೂ ಹಲವು ಪ್ರಯೋಜನಗಳಿವೆ.
ನೀವು ಕಚೇರಿಯಲ್ಲಿ ಇಲ್ಲ ಮನೆಯಲ್ಲೇ ಇರಿ ಕನಿಷ್ಠ ಎರಡರಿಂದ ಮೂರು ಗಂಟೆಗೊಮ್ಮೆ ತಣ್ಣೀರಿನಿಂದ ಮುಖ ತೊಳೆಯುವುದು ಬಹಳ ಒಳ್ಳೆಯದು. ಇದು ತ್ವಚೆಯ ರಂಧ್ರಗಳ ಮೇಲೆ ತುಂಬಿಕೊಂಡಿರುವ ಧೂಳನ್ನು ದೂರಮಾಡಿ ಮೊಡವೆ ಬ್ಲಾಕ್ ಹೆಡ್ ನಂತಹ ಸಮಸ್ಯೆ ಕಾಣಿಸಿಕೊಳ್ಳದಂತೆ ನೋಡಿಕೊಳ್ಳುತ್ತದೆ.
ಸೂರ್ಯನ ಕಿರಣಗಳು ನೇರವಾಗಿ ತ್ವಚೆಯ ಮೇಲೆ ಬಿದ್ದು ಉಂಟಾಗುವ ಹಾನಿಗಳನ್ನು ತಡೆಗಟ್ಟುತ್ತದೆ. ಯಾವುದೋ ಕಾರಣಕ್ಕೆ ಅಂದರೆ ಸರಿಯಾಗಿ ನಿದ್ದೆ ಮಾಡದ, ವಿಪರೀತ ಸುಸ್ತಾದ ಕಾರಣಕ್ಕೆ ನಿಮ್ಮ ಮುಖ ಉಬ್ಬಿದಂತೆ ಕಾಣಿಸುತ್ತಿದ್ದರೆ ಅದನ್ನು ಇದು ಸರಿಪಡಿಸುತ್ತದೆ.
ಪದೇ ಪದೇ ಮುಖ ತೊಳೆಯುವುದರಿಂದ ತ್ವಚೆ ಹೊಳಪು ಪಡೆದುಕೊಳ್ಳುತ್ತದೆ. ಬಿಸಿ ನೀರಿಗಿಂತ ತಣ್ಣೀರಿನಲ್ಲಿ ಮುಖ ತೊಳೆದು ಕೊಳ್ಳುವುದು ಹೆಚ್ಚು ಪ್ರಯೋಜನಕಾರಿ. ಇದರಿಂದ ನೀವು ಸುಂದರವಾಗಿ ಕಾಣುವುದು ಮಾತ್ರವಲ್ಲ ತ್ವಚೆಯ ಆರೋಗ್ಯವೂ ವೃದ್ಧಿಸುತ್ತದೆ.