ದೇವರ ಮನೆಯಲ್ಲಿಟ್ಟ ಕಲಶದ ಕಾಯಿ ಮೊಳಕೆ ಒಡೆದರೆ ಶುಭವೇ….? ಅಶುಭವೇ………? 13-08-2024 1:43PM IST / No Comments / Posted In: Latest News, Live News, Life Style, Astro ಕೆಲವು ಕಡೆ ಕಲಶದ ರೂಪದಲ್ಲಿ ಲಕ್ಷ್ಮಿದೇವಿಯನ್ನು ಪೂಜಿಸುವ ವಾಡಿಕೆ ಇದೆ. ಹಾಗಾಗಿ ಕೆಲವರು ದೇವರ ಮನೆಯಲ್ಲಿ ಕಲಶವನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡುತ್ತಾರೆ. ಈ ಕಲಶಕ್ಕೆ ಅಕ್ಕಿ ಅಥವಾ ನೀರನ್ನು ತುಂಬಿಸಿ ಅದನ್ನು ಮಾವಿನ ಎಲೆಗಳಿಂದ ಅಲಂಕರಿಸಿ ಅದರ ಮೇಲೆ ಲಕ್ಷ್ಮಿ ಸ್ವರೂಪವಾದ ತೆಂಗಿನಕಾಯಿಯನ್ನು ಇಟ್ಟು ಅರಿಶಿನ ಕುಂಕುಮ, ಹೂವಿಟ್ಟು ಪೂಜೆ ಮಾಡುತ್ತಾರೆ. ಆದರೆ ಕೆಲವೊಮ್ಮೆ ಈ ತೆಂಗಿನಕಾಯಿಯಲ್ಲಿ ಮೊಳಕೆ ಬರುತ್ತದೆ. ಹಾಗಾದ್ರೆ ಈ ಕಾಯಿ ಮೊಳಕೆ ಬರುವುದು ಶುಭವೇ? ಇಲ್ಲ ಅಶುಭವೇ? ಎಂಬುದನ್ನು ತಿಳಿಯಿರಿ. ದೇವರ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿದ ತೆಂಗಿನಕಾಯಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಮೊಳಕೆ ಬರುವುದಿಲ್ಲ. ಒಂದು ವೇಳೆ ಅದು ಮೊಳಕೆ ಬಂದರೆ ತುಂಬಾ ಒಳ್ಳೆಯದು. ಇದರಿಂದ ಮನೆಯಲ್ಲಿ ಐಶ್ವರ್ಯ, ಸಂಪತ್ತು, ಆರೋಗ್ಯ ವೃದ್ಧಿಯಾಗುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನೇರವೇರಲಿದೆ. ಸಾಕ್ಷಾತ್ ಮಹಾಲಕ್ಷ್ಮಿ ಆ ಮನೆಯಲ್ಲಿ ನೆಲೆಸಿದ್ದಾಳೆ, ಅವಳ ಕೃಪೆ ನಮಗಾಗಿದೆ ಎಂಬುದನ್ನು ಈ ಮೊಳಕೆ ಸೂಚಿಸುತ್ತದೆ ಎನ್ನಲಾಗಿದೆ. ಇದರಿಂದ ನೀವು ಅಂದುಕೊಡ ಕಾರ್ಯಗಳು ನೇರವೇರುತ್ತದೆಯಂತೆ. ವಾಹನ ಖರೀದಿ, ಮನೆ ಕಟ್ಟುವುದು, ಸಂತಾನ ಭಾಗ್ಯ, ಮದುವೆ ಕಾರ್ಯಗಳು ಮುಂತಾದ ಕನಸು ನನಸಾಗಲಿದೆ. ಆದರೆ ಪ್ರತಿಷ್ಠಾಪನೆ ಮಾಡಿದ ಈ ತೆಂಗಿನಕಾಯಿಯಲ್ಲಿ ಮೊಳಕೆ ಬಂದರೆ ಅದನ್ನು ಪೂಜಿಸುವಂತಿಲ್ಲ ಬದಲಾಗಿ ಅದನ್ನು ನಿಮ್ಮ ಮನೆಯ ತೋಟದಲ್ಲಿ ನೆಟ್ಟು ಅದನ್ನು ಪೋಷಿಸಿ. ಇದರಿಂದ ಆ ಗಿಡ ಬೆಳವಣಿಗೆ ಹೊಂದಿದ ಹಾಗೇ ನೀವು ಜೀವನದಲ್ಲಿ ಅಭಿವೃದ್ಧಿ ಕಾಣುತ್ತೀರಿ. ಆದರೆ ಅಪ್ಪಿತಪ್ಪಿಯೂ ಇದನ್ನು ನಿಮ್ಮ ಸ್ನೇಹಿತರಿಗೆ, ಕುಟುಂಬದವರಿಗೆ ನೀಡಲು ಹೋಗಬೇಡಿ. ಇದರಿಂದ ನಿಮ್ಮ ಅದೃಷ್ಟ ಬೇರೆಯವರ ಪಾಲಾಗುತ್ತದೆ. – ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿ ಜ್ಯೋತಿಷ್ಯ ಪೀಠಂ ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ – ಪ್ರೇಮ, ದಾಂಪತ್ಯ, ವೈವಾಹಿಕ, ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋಕ್ತವಾದ ಮಾರ್ಗವನ್ನು ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ. ತಪ್ಪದೆ ಕರೆ ಮಾಡಿ: ಪಂಡಿತ್ ಕೇಶವ್ ಕೃಷ್ಣ ಭಟ್ (ಜ್ಯೋತಿಷ್ಯ ಶಾಸ್ತ್ರಜ್ಞರು) 8971498358