ನೇಪಾಳದಲ್ಲಿ ನೈಟ್ ಕ್ಲಬ್ ಪಾರ್ಟಿಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಬಲಕ್ಕೆ ನಿಂತಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮೊಹುವಾ ಮೊಯಿತ್ರಾ, ಈ ಸಂಬಂಧ ಬಿಜೆಪಿ ಎಬ್ಬಿಸುತ್ತಿರುವ ಗದ್ದಲದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಮೊಯಿತ್ರಾ, ರಾಹುಲ್ ಗಾಂಧಿಯಾಗಿರಲಿ ಅಥವಾ ಬೇರೆ ಯಾರೇ ಆಗಿರಲಿ ನೈಟ್ ಕ್ಲಬ್ ನಲ್ಲಿ ಅಥವಾ ಖಾಸಗಿ ಸಮಾರಂಭದಲ್ಲಿ ಭಾಗಿಯಾದರೆ ತಪ್ಪೇನು ? ಎಂದು ಪ್ರಶ್ನಿಸಿದ್ದಾರೆ.
BIG BREAKING: ಸಂಸದೆ ನವನೀತ್ ರಾಣಾ, ರವಿ ರಾಣಾ ದಂಪತಿಗೆ ಜಾಮೀನು ಮಂಜೂರು
ರಾಹುಲ್ ಗಾಂಧಿ ಅವರು ನೈಟ್ ಕ್ಲಬ್ ನಲ್ಲಿ ಪಾಲ್ಗೊಂಡ ವಿಡಿಯೋ ಹರಿಬಿಟ್ಟಿರುವ ಬಿಜೆಪಿಯ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮೊಯಿತ್ರಾ, ಅಸ್ವಸ್ಥಗೊಂಡಿರುವ ಬಿಜೆಪಿಯ ಟ್ರೋಲ್ ಮುಖ್ಯಸ್ಥರಾಗಿರುವ ಮಾಳವೀಯ ಅವರು ಒಳ್ಳೆಯದರ ಬಗ್ಗೆ ಯೋಚನೆ ಮಾಡಲಿ ಎಂದು ತಿಳಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್, ಒಬ್ಬ ರಾಜಕಾರಣಿ ನೈಟ್ ಕ್ಲಬ್ ಗೆ ಹೋಗುವುದರಲ್ಲಿ ತಪ್ಪೇನು ಇಲ್ಲ. ಪಾರ್ಲಿಮೆಂಟ್ ನಲ್ಲಿ ಕುಳಿತು ಅಶ್ಲೀಲ ವಿಡಿಯೋಗಳನ್ನು ನೋಡುವುದಕ್ಕಿಂತ ನೈಟ್ ಕ್ಲಬ್ ಗೆ ಹೋಗುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಸ್ವರಾ ಭಾಸ್ಕರ್ ಕೂಡಾ ರಾಹುಲ್ ಗಾಂಧಿ ಪರ ಬ್ಯಾಟ್ ಬೀಸಿದ್ದಾರೆ.