ಯಾರಾದರೂ ಏನನ್ನಾದರೂ ತಿನ್ನೋವಾಗ ಅವರ ಬಾಯಿಂದ ಬರುವ ಶಬ್ದದಿಂದ ನಿಮಗೆ ಹೇಸಿಗೆ ಎನಿಸುತ್ತದೆಯೇ..? ನಿಮಗೂ ಸಹ ಈ ಶಬ್ದದಿಂದ ಅಲರ್ಜಿ ಇದೆ ಎಂದಾದಲ್ಲಿ ನೀವುಮಿಸೊಫೋನಿಯಾ ಎಂಬ ಸ್ಥಿತಿಯಲ್ಲಿದ್ದೀರಾ ಎಂದರ್ಥ. ಈ ಅಲರ್ಜಿಯನ್ನ ಹೊಂದಿರುವವರು ಇಂತಹ ಶಬ್ದಗಳನ್ನ ಕೇಳಿದೊಡನೆಯೇ ಕಿರಿಕಿರಿ ಅನುಭವಿಸುತ್ತಾರೆ.
ಆಹಾರವನ್ನ ಅಗಿಯುವ ಶಬ್ದದಿಂದ ಕಿರಿಕಿರಿಗೊಳಗಾಗುವವರನ್ನ ಈ ವರ್ಗಕ್ಕೆ ಸೇರಿಸಬಹುದು ಎಂದು ಸಂಶೋಧಕರು ಹೇಳಿದ್ದಾರೆ.
ಆಹಾರವನ್ನ ಅಗಿಯುವ ಹಾಗೂ ಪಾನೀಯಗಳನ್ನ ಕುಡಿಯೋದ್ರಿಂದ ಬರುವ ಶಬ್ದವನ್ನ ಇವರಿಗೆ ಸಹಿಸಲು ಸಾಧ್ಯವಾಗೋದಿಲ್ಲ. ಆದರೆ ಈ ರೀತಿ ಏಕೆ ಆಗುತ್ತೆ ಅನ್ನೋದರ ಬಗ್ಗೆ ಸಂಶೋಧಕರು ಅಧ್ಯಯನ ನಡೆಸಿದ್ದರು.
ಒಬ್ಬ ವ್ಯಕ್ತಿಯ ಮೆದುಳಿನ ಶ್ರವಣೇಂದ್ರಿಯ ಕಾರ್ಟೆಕ್ಸ್, ಬಾಯಿ, ಗಂಟಲು ಹಾಗೂ ಮುಖದ ನಡುವೆ ಇರುವ ನಿಯಂತ್ರಣದ ಪ್ರದೇಶದಲ್ಲಿ ಸಂಪರ್ಕ ಹೆಚ್ಚಾದಲ್ಲಿ ಈ ರೀತಿ ಸಮಸ್ಯೆ ಉಂಟಾಗುತ್ತೆ ಎಂದು ಅಧ್ಯಯನ ಹೇಳಿದೆ.
ಶ್ರವಣೇಂದ್ರಿಯ ಶಬ್ದಗಳನ್ನ ಸಂಸ್ಕರಿಸುವ ಕೆಲಸ ಮಾಡಿದ್ರೆ ಕಾರ್ಟಕ್ಸ್ ಅದರ ಚಲನೆಯನ್ನ ನಿಯಂತ್ರಿಸೋ ಕೆಲಸ ಮಾಡುತ್ತೆ. ಇದನ್ನ ಇನ್ನೂ ಬೇರೆ ಅರ್ಥದಲ್ಲಿ ವಿಶ್ಲೇಷಣೆ ಮಾಡಬೇಕು ಅಂದರೆ ಮೆದುಳಿನ ಎರಡು ವಿಭಿನ್ನ ಭಾಗಗಳಲ್ಲಿ ಸೂಪರ್ಸೆನ್ಸಿಟೈಸಡ್ ರೀತಿಯ ಸಂಪರ್ಕದಿಂದಾಗಿ ಈ ರೀತಿ ಅಲರ್ಜಿ ಉಂಟಾಗುತ್ತದೆ ಎಂದು ವಿವರಿಸಲಾಗಿದೆ.