ಕನಸಿನಲ್ಲಿ ಸಾವು ಮತ್ತಿತರ ಆಘಾತಕಾರಿ ಸಂಗತಿಗಳು ಒಮ್ಮೊಮ್ಮೆ ಕಾಣುತ್ತಲೇ ಇರುತ್ತವೆ. ಅಂತ್ಯಕ್ರಿಯೆ, ಚಿತಾಭಸ್ಮ, ಸಂಬಂಧಿಕರು ಸತ್ತಂತೆ ಕನಸು ಇವೆಲ್ಲ ನಮ್ಮನ್ನು ಹೆದರಿಸಿಬಿಡುತ್ತವೆ. ಅಷ್ಟೇ ಅಲ್ಲ ಇವೆಲ್ಲವೂ ಭವಿಷ್ಯದ ಘಟನೆಗಳ ಸಂಕೇತಗಳಿರಬಹುದು ಎಂಬ ಅನುಮಾನವನ್ನು ಹುಟ್ಟುಹಾಕುತ್ತವೆ. ಸ್ವಪ್ನ ಶಾಸ್ತ್ರದ ಪ್ರಕಾರ ಇಂತಹ ಕನಸು ಕಂಡರೆ ಅದು ಶುಭವೋ ಅಥವಾ ಅಶುಭವೋ ಎಂಬುದನ್ನು ತಿಳಿಯೋಣ.
ಪ್ರೀತಿಪಾತ್ರರು ಚಿತೆಯ ಮೇಲೆ ಮಲಗಿದಂತೆ, ಅಂತ್ಯಕ್ರಿಯೆಯ ಬೆಂಕಿ ಹಾಕಿದಂತೆ ಕಾಣುವ ಕನಸುಗಳೆಲ್ಲ ಭಯಾನಕ ಮತ್ತು ಗೊಂದಲಮಯವಾಗಿರುತ್ತವೆ. ಆದರೆ ಅವುಗಳ ಅರ್ಥವು ಕೆಟ್ಟದ್ದಲ್ಲ. ಈ ಕನಸುಗಳು ನಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತವೆ ಎಂದೇನಿಲ್ಲ. ಕೆಲವೊಮ್ಮೆ ಅಂತಹ ಕನಸುಗಳು ಹೊಸ ಆರಂಭದ ಸೂಚನೆಯಾಗಿರುತ್ತವೆ.
ಕನಸಿನಲ್ಲಿ ಸ್ವಯಂ ಸಾವು!
ಕನಸಿನಲ್ಲಿ ನಾವೇ ಸತ್ತಂತೆ ಕಂಡರೆ ಅದು ಒಳ್ಳೆಯ ಸಂಕೇತವಾಗಿದೆ. ಎಲ್ಲಾ ಸಮಸ್ಯೆಗಳು ಶೀಘ್ರದಲ್ಲೇ ಕೊನೆಗೊಳ್ಳುವುದರ ಜೊತೆಗೆ ಹೊಸ ಆರಂಭದ ಸೂಚನೆ ಅದಾಗಿರುತ್ತದೆ.
ಶವಪೆಟ್ಟಿಗೆ ಒಯ್ಯುವ ಕನಸು!
ಕನಸಿನಲ್ಲಿ ಶವಪೆಟ್ಟಿಗೆ ಹೊತ್ತೊಯ್ದಂತೆ, ಪ್ರೀತಿಪಾತ್ರರು ಚಟ್ಟದ ಮೇಲೆ ಮಲಗಿರುವುದನ್ನು ನೋಡಿದರೆ ಅದು ಸಹ ಮಂಗಳಕರವಾಗಿರುತ್ತದೆ. ಇದು ವ್ಯಕ್ತಿಯ ಆಯಸ್ಸನ್ನು ಹೆಚ್ಚಿಸುತ್ತದೆ. ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದರೆ ಅದರಿಂದ ಮುಕ್ತಿ ಸಿಗುತ್ತದೆ.
ಸತ್ತ ಪೂರ್ವಜರನ್ನು ಕನಸಿನಲ್ಲಿ ನೋಡುವುದು
ಕನಸಿನಲ್ಲಿ ಸತ್ತ ವ್ಯಕ್ತಿ ಅಥವಾ ಪೂರ್ವಜರನ್ನು ನೋಡಿದರೆ ಅದು ಸಹ ಒಳ್ಳೆಯ ಸಂಕೇತವಾಗಿದೆ. ಇದರರ್ಥ ಪೂರ್ವಜರು ನಿಮ್ಮೊಂದಿಗೆ ಸಂತೋಷವಾಗಿದ್ದಾರೆ ಎಂಬುದು. ಅಷ್ಟೇ ಅಲ್ಲ ನಿಮ್ಮ ಆಸೆಗಳು ಈಡೇರಲಿವೆ ಎಂಬುದರ ಸೂಚನೆಯೂ ಹೌದು.
ಉರಿಯುತ್ತಿರುವ ಬೆಂಕಿಯ ಕನಸು
ಕನಸಿನಲ್ಲಿ ಉರಿಯುತ್ತಿರುವ ಬೆಂಕಿಯನ್ನು ನೋಡುವುದು ಒಳ್ಳೆಯದಲ್ಲ. ಕನಸಿನ ವಿಜ್ಞಾನದ ಪ್ರಕಾರ ಈ ರೀತಿ ಕಂಡರೆ ಆತ್ಮೀಯರೊಂದಿಗೆ ಜಗಳವಾಗಬಹುದು.
ಕನಸಿನಲ್ಲಿ ಮೃತದೇಹ ಕಾಣುವುದು!
ಕನಸಿನಲ್ಲಿ ಮೃತದೇಹ ಕಂಡರೆ, ನೀವು ಹೋರಾಡುತ್ತಿರುವ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದರ್ಥ.
ಕನಸಿನಲ್ಲಿ ಸಮಾಧಿಯನ್ನು ನೋಡುವುದು
ಕನಸಿನಲ್ಲಿ ಸಮಾಧಿಯನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇಸ್ಲಾಂನಲ್ಲಿಯೂ ಸಹ, ಅಂತಹ ಕನಸುಗಳನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಇದು ಜೀವನದಲ್ಲಿ ಹೊಸ ಆರಂಭ ಅಥವಾ ಅದೃಷ್ಟದ ಸಂಕೇತವಾಗಿದೆ.
– ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿ ಜ್ಯೋತಿಷ್ಯ ಪೀಠಂ
ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ – ಪ್ರೇಮ, ದಾಂಪತ್ಯ, ವೈವಾಹಿಕ, ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋಕ್ತವಾದ ಮಾರ್ಗವನ್ನು ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ.
ತಪ್ಪದೆ ಕರೆ ಮಾಡಿ:
ಪಂಡಿತ್ ಕೇಶವ್ ಕೃಷ್ಣ ಭಟ್ (ಜ್ಯೋತಿಷ್ಯ ಶಾಸ್ತ್ರಜ್ಞರು) 8971498358