ಇತ್ತೀಚಿನ ದಿನಗಳಲ್ಲಿ ಬಹುತೇಕ ಮಹಿಳೆಯಲ್ಲಿ ಕಂಡುಬರುವ ಸಮಸ್ಯೆಯೆಂದರೆ ಥೈರಾಯ್ಡ್ ಸಮಸ್ಯೆ.
ಕುತ್ತಿಗೆ ಭಾಗದಲ್ಲಿರುವ ಥೈರಾಯ್ಡ್ ಗ್ರಂಥಿ ದೇಹದ ಹಾರ್ಮೋನ್ ಚಯಾಪಚಯ ಕ್ರಿಯೆಗಳನ್ನು ನಿಯಂತ್ರಿಸುತ್ತದೆ. ದೇಹದಲ್ಲಿನ ಹಾರ್ಮೋನ್ ಅಸಮತೋಲನದಿಂದಾಗಿ ಹೈಪರ್ ಅಥವಾ ಹೈಪೋ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಥೈರಾಯ್ಡ್ ಸಮಸ್ಯೆಗೆ ಕೆಲವು ಮನೆ ಮದ್ದುಗಳು ಹೆಚ್ಚು ಪರಿಣಾಮಕಾರಿಯಾಗಿದೆ.
* ದನಿಯಾ: ಎರಡು ಚಮಚ ದನಿಯಾ ಬೀಜಗಳನ್ನು ಸ್ವಲ್ಪ ಜಜ್ಜಿ ನಿರಿಗೆ ಹಾಕಿ ಚೆನ್ನಾಗಿ ಕುದಿಸಿ ಆರಿಸಿ. ಹೀಗೆ ತೆಗೆದ ದನಿಯಾ ನೀರನ್ನು ಶೋಧಿಸಿ, ಅರ್ಧ ಗ್ಲಾಸ್ ನಷ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಥೈರೈಯ್ಡ್ ಸಮಸ್ಯೆ ಕಡಿಮೆಯಾಗುತ್ತದೆ.
* ಅಗಸೆ ಬೀಜ: ಅಗಸೆ ಬೀಜವನ್ನು ಫ್ರೈ ಮಾಡಿ ಮಿಕ್ಸಿಯಲ್ಲಿ ಹಾಕಿ ಪೌಡರ್ ಮಾಡಿಕೊಳ್ಳಿ. ಒಂದು ಚಮಚ ಅಗಸೆ ಬೀಜದ ಪುಡಿಯನ್ನು ಬಿಸಿ ನೀರಿಗೆ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಥೈರಾಯ್ಡ್ ಸಮಸ್ಯೆ ಕಡಿಮೆಯಾಗುತ್ತದೆ.