ಆಪ್ಟಿಕಲ್ ಇಲ್ಯೂಷನ್ಗಳು ವೀಕ್ಷಣಾ ಕೌಶಲ್ಯ ಮತ್ತು ಐಕ್ಯೂ ಪರೀಕ್ಷಿಸಲು ಉತ್ತಮ ಮಾರ್ಗವಾಗಿದೆ. ಅತ್ಯಂತ ಆತ್ಮವಿಶ್ವಾಸದ ವ್ಯಕ್ತಿಗಳೂ ಸಹ ಅನೇಕ ಬಾರಿ ಆಪ್ಟಿಕಲ್ ಇಲ್ಯೂಷನ್ ನಿಖರವಾಗಿ ಕಂಡುಹಿಡಿಯುವಲ್ಲಿ ವಿಫಲರಾಗುತ್ತಾರೆ.
ಅಂತಹ ಒಂದು ಚಿತ್ರವನ್ನು ಮಾಸ್ಸಿಮೊ ಎಂಬ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು ವೀಕ್ಷಕರನ್ನು ಅಚ್ಚರಿಗೊಳಿಸಿದೆ.
ಚಿತ್ರವು ಹಿಮಭರಿತ ಭೂ ಪ್ರದೇಶವನ್ನೊಳಗೊಂಡಿದೆ. ಅದರ ನಡುವೆ ಕಪ್ಪು ಪ್ರಾಣಿ ಇದೆ. ಆ ಪ್ರಾಣಿ ಮನುಷ್ಯನೋ ಅಥವಾ ನಾಯಿಯೋ ಎಂಬ ಪ್ರಶ್ನೆಗೆ ಉತ್ತರ ಹುಡುಕುವುದೇ ಟಾಸ್ಕ್.
ದೀರ್ಘಕಾಲದವರೆಗೆ ಚಿತ್ರವನ್ನು ವೀಕ್ಷಿಸಿದ ನೆಟ್ಟಿಗರು ಓಡಲು ಪ್ರಯತ್ನಿಸುತ್ತಿರುವ ಮನುಷ್ಯ ಎಂದು ಗುರುತಿಸಿದ್ದಾರೆ. ಆದರೆ, ಆ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ಪದೇ ಪದೇ ಹುಡುಕಿದಾಗ ಅದು ಕಪ್ಪು ನಾಯಿ ಎಂದು ನೋಡುಗರಿಗೆ ಮನದಟ್ಟಾಯಿತು.
ನಾಯಿಯ ಪಾದ ಮತ್ತು ಬಾಲವು ಮನುಷ್ಯನಂತೆ ಕಾಣುವ ರೀತಿ ಇದೆ. ಇದಲ್ಲದೆ, ನಾಯಿಯ ದೇಹದಿಂದ ಮುಖವು ಸಂಪೂರ್ಣವಾಗಿ ಮರೆಮಾಚಲ್ಪಟ್ಟಿದೆ, ಇದು ನೆಟ್ಟಿಗರನ್ನು ಮತ್ತಷ್ಟು ಗೊಂದಲಗೊಳಿಸಿದೆ.
ನಾಯಿಯ ಮೇಲ್ಮೈ ಮನುಷ್ಯನು ಧರಿಸಿರುವ ಕಪ್ಪು ಮೇಲಂಗಿಯಂತೆ ಕಾಣುತ್ತದೆ. ಹಿಮಭರಿತ ಕಾಲು ಅವನ ಬೂಟುಗಳು ಎಂದು ತೋರುತ್ತದೆ.