’ಕಣ್ಣಾರೆ ಕಂಡರೂ ಪ್ರಮಾಣಿಸಿ ನೋಡು’ ಎಂದು ಹಿರಿಯರು ಹೇಳಿರುವ ಮಾತನ್ನು ದಿನನಿತ್ಯದ ಬದುಕಿನಲ್ಲಿ ಒಮ್ಮೆಯಾದರೂ ಪ್ರಯೋಗಿಸಿ ನೋಡಬೇಕಾಗುತ್ತದೆ.
ಇಂಥದ್ದೇ ನಿದರ್ಶನವೊಂದರಲ್ಲಿ ಫಿಲಿಯಂ ಗೈಗಾಂಟೆಯುಂ ಹೆಸರಿನ ಎಲೆಕೀಟವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೋಡಲು ಥೇಟ್ ಎಲೆಯಂತೆಯೇ ಕಾಣುವ ಈ ಕೀಟಗಳು ಎಲೆಗಳ ಮೇಲೆ ಕುಳಿತರೆ ವ್ಯತ್ಯಾಸ ಗುರುತಿಸುವುದೇ ಕಷ್ಟವಾಗುತ್ತದೆ.
’ಸೈನ್ಸ್ ಬೈ ಗುಫ್’ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯೊಂದು ಈ ವಿಡಿಯೋ ಶೇರ್ ಮಾಡಿದ್ದು, ಒಂದು ದಶಲಕ್ಷಕ್ಕೂ ಹೆಚ್ಚಿನ ವೀವ್ಸ್ ಪಡೆದುಕೊಂಡಿದೆ.
“ಜಗತ್ತಿನಲ್ಲಿ ಮಾನವರಿಗೆ ಕಂಡಿರುವ ಅತಿ ದೊಡ್ಡ ಎಲೆಕೀಟವಾದ ಫಿಲ್ಲಿಯಂ ಗೈಗಾಂಟೆಯುಂ ದೇಹ ಬಹಳ ಅಗಲ ಹಾಗು ದೊಡ್ಡದಿದ್ದು, ಎಲೆ ಆಕಾರದಲ್ಲಿ ಇದೆ. ಕಾಲುಗಳಿಗೆ ಅಪೆಂಡೇಜ್‌ಗಳಿದ್ದು, ಚರ್ಮವು ಹಸಿರು ಬಣ್ಣ ಹಾಗು ಮಧ್ಯದಲ್ಲಿ ಕಂದು ಸ್ಪಾಟ್‌ಗಳನ್ನು ಹೊಂದಿದೆ. ಹಸಿರಿನ ಛಾಯೆ ಹಾಗೂ ಕಂದು ತುದಿಗಳ ಪ್ರಮಾಣವು ಕೀಟದಿಂದ ಕೀಟಕ್ಕೆ ವ್ಯತ್ಯಯವಾಗುತ್ತದೆ. ಹೆಣ್ಣು ಕೀಟಗಳು 10 ಸೆಂಮೀನಷ್ಟು ಉದ್ದ ಬೆಳೆಯುತ್ತವೆ” ಎಂದು ಕ್ಯಾಪ್ಷನ್‌ನಲ್ಲಿ ಮಾಹಿತಿ ನೀಡಲಾಗಿದೆ.
https://www.youtube.com/watch?v=unuNeTG5gbM&feature=youtu.be