ಅಂಗಡಿಯಲ್ಲಿ ತೆಗೆದುಕೊಳ್ಳುವ ಜೇನು ಶುದ್ದವೋ ಅಶುದ್ದವೋ ಎಂದು ತಿಳಿಯುವ ಪರೀಕ್ಷೆ ಮಾಡುವುದು ಹೇಗೆ ಗೊತ್ತೇ?
ಜೇನಿಗೆ ಹೆಚ್ಚಾಗಿ ಬೆಲ್ಲ ಅಥವಾ ಸಕ್ಕರೆ ಪಾಕವನ್ನು ಬೆರೆಸಿ ಮಾರುತ್ತಾರೆ. ಇದರಲ್ಲಿ ಕೆಲವು ರಾಸಾಯನಿಕ ಕೂಡ ಮಿಕ್ಸ್ ಮಾಡುತ್ತಾರೆ ಎಂದು ಹೇಳುತ್ತಾರೆ.
ನಿಮ್ಮಲ್ಲಿರುವ ಜೇನಿನ ಒಂದು ಹನಿಯನ್ನು ಖಾಲಿ ಕಾಗದದ ಮೇಲೆ ಹಾಕಿ. ಒಂದು ವೇಳೆ ಈ ಕಾಗದ ನಿಮ್ಮ ಜೇನಿನ ಹನಿಯನ್ನು ಹೀರಿಕೊಂಡು ಒದ್ದೆಯಾದರೆ ನಿಮ್ಮ ಜೇನು ಶುದ್ಧವಲ್ಲ ಎಂದು ತಿಳಿಯಿರಿ.
ಇನ್ನೊಂದು ಪ್ರಕಾರದಂತೆ ನಿಮ್ಮಲ್ಲಿರುವ ಜೇನಿನ ಒಂದು ಹನಿಯನ್ನು ಧೂಳು ಇಲ್ಲದ ಮರಳಿನ ಮೇಲೆ ಹಾಕಿ. ಧೂಳು ಇಲ್ಲದ ಮರಳು ಎಂದರೆ ಸಮುದ್ರದ ಬದಿಯಲ್ಲಿ ಸಿಗುವ ಶುದ್ಧವಾದ ಮರಳು. ಒಂದು ವೇಳೆ ನಿಮ್ಮ ಜೇನಿನ ಹನಿ ಮರಳಿನಲ್ಲಿ ಮಿಕ್ಸ್ ಆದರೆ ನಿಮ್ಮ ಜೇನು ಅಶುದ್ಧ ಎಂದು ಲೆಕ್ಕ. ಏಕೆಂದರೆ ಶುದ್ಧ ಜೇನು ಯಾವುದೇ ವಸ್ತುವಿನ ಜೊತೆ ಬೆರೆಯುವುದಿಲ್ಲ. ಕಡ್ಡಿಯಿಂದ ಮಿಕ್ಸ್ ಮಾಡಲು ಪ್ರಯತ್ನಿಸಿದರೆ ಮಾತ್ರ ಅದು ಚಂಡು ರೂಪದಲ್ಲಿ ಮುದ್ದೆ ಆಗಬಹುದು ಅಷ್ಟೆ.
ಇನ್ನೊಂದು ವಿಧಾನ ಎಂದರೆ ಒಂದು ಗ್ಲಾಸ್ ನೀರಿನಲ್ಲಿ ಸ್ವಲ್ಪ ಜೇನನ್ನು ಹಾಕಿ. ನಿಮ್ಮ ಜೇನು ಯಾವುದೇ ಪ್ರಯಾಸ ಇಲ್ಲದೆ ಸಕ್ಕರೆ ನೀರಲ್ಲಿ ಬೆರೆತಂತೆ ಮಿಕ್ಸ್ ಆದರೆ ನಿಮ್ಮ ಜೇನು ಅಶುದ್ಧ ಎಂದು ಅರ್ಥ.