ಜೇನುತುಪ್ಪ ಆರೋಗ್ಯಕ್ಕೆ ಒಳ್ಳೆಯದು. ಜೇನುತುಪ್ಪದಲ್ಲಿ ಅನೇಕ ಔಷಧಿ ಗುಣಗಳಿವೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಜೇನುತುಪ್ಪವನ್ನು ಕಲಬೆರಕೆ ಮಾಡಲಾಗ್ತಿದೆ. ಜೇನು ತುಪ್ಪಕ್ಕೆ ಸಕ್ಕರೆ ಪಾಕ ಸೇರಿಸಿ ಜನರಿಗೆ ಮೋಸ ಮಾಡಲಾಗ್ತಿದೆ. ನೀವು ಖರೀದಿಸಿರುವ ಜೇನುತುಪ್ಪದ ಸತ್ಯ ತಿಳಿಯುವುದು ಕಷ್ಟವಲ್ಲ. ಮನೆಯಲ್ಲಿ ಸುಲಭವಾಗಿ ಅದ್ರ ಪರೀಕ್ಷೆ ಮಾಡಬಹುದು.
ಒಂದು ಗ್ಲಾಸ್ ಗೆ ನೀರನ್ನು ಹಾಕಿ. ಅದಕ್ಕೆ ಜೇನುತುಪ್ಪವನ್ನು ಹಾಕಿ. ಜೇನುತುಪ್ಪ ನೀರಿನಲ್ಲಿ ಬೆರೆತರೆ ಅದು ನಕಲಿ ಎಂದರ್ಥ. ಜೇನುತುಪ್ಪ ಗ್ಲಾಸ್ ನ ಕೆಳ ಭಾಗದಲ್ಲಿ ಕುಳಿತರೆ ಅದು ಶುದ್ಧವಾಗಿದೆ ಎಂದು ಅರ್ಥ ಮಾಡಿಕೊಳ್ಳಿ.
ಹತ್ತಿ ಮೂಲಕವೂ ನೀವು ಜೇನುತುಪ್ಪವನ್ನು ಪರೀಕ್ಷೆ ಮಾಡಬಹುದು. ಸ್ವಲ್ಪ ಹತ್ತಿ ತೆಗೆದುಕೊಂಡು ಅದಕ್ಕೆ ಜೇನುತುಪ್ಪ ಸುರಿಯಿರಿ. ನಂತ್ರ ಹತ್ತಿಗೆ ಬೆಂಕಿ ಹಚ್ಚಿ. ಹತ್ತಿ ಉರಿದರೆ ಜೇನುತುಪ್ಪ ನಕಲಿ ಎಂದರ್ಥ. ಒಂದು ವೇಳೆ ಬೆಂಕಿ ಹತ್ತಿದ್ದು, ಚಿಟ್ ಚಿಟ್ ಎಂದು ಶಬ್ಧ ಬರ್ತಿದ್ದರೆ ಜೇನುತುಪ್ಪ ಕಲಬೆರಕೆಯಾಗಿದೆ ಎಂದರ್ಥ.
ಮರದ ತುಂಡಿಗೆ ಜೇನುತುಪ್ಪ ಹಾಕಿ. ನಂತ್ರ ಬೆಂಕಿ ಹಾಕಿ. ಮರದ ತುಂಡು ಉರಿದರೆ ಜೇಣುತುಪ್ಪ ಶುದ್ಧವಾಗಿದೆ ಎಂದರ್ಥ. ಇಲ್ಲವೆಂದ್ರೆ ಜೇನುತುಪ್ಪ ಕಲಬೆರಕೆಯಾಗಿದೆ ಎಂದು ಅರ್ಥ ಮಾಡಿಕೊಳ್ಳಿ.
ಬಿಳಿ ಬಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಜೇನು ತುಪ್ಪವನ್ನು ಹಾಕಿ. ಸ್ವಲ್ಪ ಸಮಯದ ನಂತ್ರ ಅದನ್ನು ಸ್ವಚ್ಛಗೊಳಿಸಿ. ಕಲೆ ಹೋಗಿದ್ದರೆ ಜೇನು ಶುದ್ಧವಾಗಿದೆ. ಕಲೆಯಿದ್ದರೆ ಜೇನು ಕಲಬೆರಕೆಯಾಗಿದೆ ಎಂಬ ಸೂಚನೆ.
ಋತುವಿನ ಆಧಾರದ ಮೇಲೂ ಜೇನು ತುಪ್ಪವನ್ನು ಪರೀಕ್ಷೆ ಮಾಡಬಹುದು. ಚಳಿಗಾಲದಲ್ಲಿ ಜೇನುತುಪ್ಪ ಹೆಪ್ಪುಗಟ್ಟುತ್ತದೆ. ಬೇಸಿಗೆಯಲ್ಲಿ ಕರಗುತ್ತದೆ. ಮನೆಯಲ್ಲಿರುವ ಜೇನುತುಪ್ಪ ಈ ರೀತಿ ಬದಲಾಗದೆ ಹೋದಲ್ಲಿ ಅದು ಶುದ್ಧ ತುಪ್ಪವಲ್ಲ ಎಂದರ್ಥೈಸಿಕೊಳ್ಳಿ.