alex Certify ತಲೆ ‘ಕೂದಲು’ ಉದುರುತ್ತಿದೆಯೇ…? ಚಿಂತೆ ಬಿಟ್ಟು ಬಳಸಿ ಈ ಸೂಪರ್‌ ಹೇರ್ ಪ್ಯಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆ ‘ಕೂದಲು’ ಉದುರುತ್ತಿದೆಯೇ…? ಚಿಂತೆ ಬಿಟ್ಟು ಬಳಸಿ ಈ ಸೂಪರ್‌ ಹೇರ್ ಪ್ಯಾಕ್

ಕೂದಲು ಹೆಚ್ಚಾಗಿ ಉದುರುತ್ತಿದ್ದರೆ, ಹೊಟ್ಟು ಹೆಚ್ಚಾಗಿದ್ದರೆ ಕೂದಲಿಗೆ ಈ ಹೇರ್ ಪ್ಯಾಕ್ ಅನ್ನು ಬಳಸಬಹುದು. ಇದನ್ನು ತಯಾರಿಸುವ ವಿಧಾನ ಇಲ್ಲಿದೆ.

ಅಲೋವೆರಾ, ಈರುಳ್ಳಿ, ಮತ್ತು ಆಲೂಗಡ್ಡೆಯನ್ನು ತೆಗೆದುಕೊಳ್ಳಿ. ಅಲೋವೆರಾವನ್ನು ಚೆನ್ನಾಗಿ ತೊಳೆದು ಮುಳ್ಳನ್ನು ಕತ್ತರಿಸಿ ತೆಗೆದು ಚಿಕ್ಕ ತುಂಡುಗಳಾಗಿ ಮಾಡಿ. ಅಲೋವೆರಾದಲ್ಲಿ ವಿಟಮಿನ್ ಇ ಹೇರಳವಾಗಿದೆ. ಇದು ಕೂದಲು ಉದ್ದ ಮತ್ತು ದಟ್ಟವಾಗಿ ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ ಮತ್ತು ಹಾನಿಯಾದ ಕೂದಲನ್ನು ಪೋಷಿಸುತ್ತದೆ.

ಈರುಳ್ಳಿಯಲ್ಲಿ ಸಲ್ಫರ್ ಅಂಶ ಹೇರಳವಾಗಿದೆ. ಇದು ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಇದಕ್ಕೆ ಆಲೂಗಡ್ಡೆ ಬೆರೆಸಿ ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿ. ಈ ಮಿಶ್ರಣವನ್ನು ವಾರದಲ್ಲಿ ಮೂರು ಬಾರಿ ಮಾಡಿ. ಸ್ನಾನ ಮಾಡುವ ಮುಂಚೆ ಈ ಮಿಶ್ರಣವನ್ನು ತಲೆಯ ಬುಡದ ಕೆಳಗೆ ಹಚ್ಚಿ. ಸ್ವಲ್ಪ ಹೊತ್ತು ಹಾಗೇ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದರಿಂದ ಕೂದಲು ಚೆನ್ನಾಗಿ ಬೆಳೆಯುತ್ತವೆ. ಕೂದಲಿನ ಯಾವುದೇ ಸಮಸ್ಯೆ ಇದ್ದರೂ ಬಗೆಹರಿಯುತ್ತದೆ. ತಲೆಯ ಹೊಟ್ಟು ನಿವಾರಣೆಯಾಗುತ್ತದೆ. ಕೂದಲು ಉದುರುವುದನ್ನು ತಡೆಗಟ್ಟುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...