alex Certify ನಿಜವಾಗಿಯೂ ‘ಗ್ರೀನ್ ಟೀ’ ಆರೋಗ್ಯಕರ ಪೇಯವೇ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಜವಾಗಿಯೂ ‘ಗ್ರೀನ್ ಟೀ’ ಆರೋಗ್ಯಕರ ಪೇಯವೇ…..?

‘ಗ್ರೀನ್‌ ಟೀ’ ಆರೋಗ್ಯಕರ ಪಾನೀಯ ಎಂದು ಬಹಳ ಪ್ರಚಾರ ಮಾಡಲಾಗಿದೆ. ಗ್ರೀನ್ ಟೀ ಪುಡಿ ಕೂಡ ಸಾಮಾನ್ಯ ಚಹಾ ಎಲೆಗಳ ಪ್ರಬೇಧಕ್ಕೆ ಸೇರಿದ, ಅದೇ ತರಹದ ಎಲೆಗಳಿಂದಲೇ ತಯಾರು ಮಾಡಲಾಗುತ್ತದೆ.

ಆದರೆ ವ್ಯತ್ಯಾಸವೇನು ಅಂದರೆ ಹಸಿರು ಚಹಾಕ್ಕೆ ಎಲೆಗಳನ್ನು ಜಾಸ್ತಿ ಜಾಗರೂಕತೆಯಿಂದ ಸಂಸ್ಕರಿಸಲಾಗುತ್ತದೆ. ಹೀಗಾಗಿ ಸಾಮಾನ್ಯ ಚಹಾ ಪುಡಿಗಿಂತ ಗ್ರೀನ್‌ ಟೀ ಎಲೆಗಳು ಒಣಗಿ ಪುಡಿಯಾದ ಮೇಲೆಯೂ ಹೆಚ್ಚು ಪೋಷಕಾಂಶಗಳನ್ನು ಉಳಿಸಿಕೊಂಡಿರುತ್ತದೆ.

ಆದರೆ ಗ್ರೀನ್‌ ಟೀ ಕುಡಿಯುವುದರಿಂದ ಯಾವ ಅಡ್ಡಪರಿಣಾಮಗಳೂ ಇಲ್ಲ, ಇದು ಅತ್ಯಂತ ಆರೋಗ್ಯಕಾರಿ ಪಾನೀಯ ಎಂದು ತಿಳಿದುಕೊಳ್ಳುವುದೂ ಸಹ ತಪ್ಪು. ಹೀಗಾಗಿ ಗ್ರೀನ್‌ ಟೀ ಪಾನೀಯದಿಂದ ಕೆಲವರ ಆರೋಗ್ಯದ ಮೇಲೆ ಆಗುವ ಅಡ್ಡಪರಿಣಾಮಗಳನ್ನ ಈ ಕೆಳಗೆ ತಿಳಿಸಿದ್ದೇವೆ ನೋಡಿ.

ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳು

ಗ್ರೀನ್‌ ಟೀ ಸಂಸ್ಕರಿಸುವಾಗ ಆಕ್ಸಿಡೇಶನ್‌ ಅಥವಾ ಫರ್ಮಂಟೇಶನ್‌ ಎಂಬ ವಿಧಾನವನ್ನು ಅನುಸರಿಸಲಾಗುತ್ತದೆ. ಈ ವಿಧಾನದಲ್ಲಿ ಎಲೆಗಳೊಂದಿಗಿರುವ ಟ್ಯಾನಿನ್‌ ಗಳನ್ನ ಬೇರ್ಪಡಿಸಲು ಸಾಧ್ಯವಿಲ್ಲ. ಆದರೆ ಈ ಟ್ಯಾನಿನ್‌ ಎಂಬ ವಸ್ತುವು ನಮ್ಮ ಜೀರ್ಣಶಕ್ತಿಯನ್ನ ಕುಂದಿಸುತ್ತವೆ. ಟ್ಯಾನಿನ್‌ ಗಳಿಂದಾಗಿ ವಾಕರಿಕೆ ಮತ್ತು ಮಲಬದ್ಧತೆಯಂಥ ತೊಂದರೆ ಉಂಟಾಗಬಹುದು.

ದೇಹದಲ್ಲಿಯ ಕಬ್ಬಿಣಾಂಶವನ್ನ ಕುಂದಿಸುತ್ತದೆ

ಗ್ರೀನ್‌ ಟೀಯಲ್ಲಿ ಕ್ಯಾಟ್ಚಿನ್ಸ್ ಮತ್ತು ಆಂಟಿಆಕ್ಸಿಡೆಂಟ್ಸ್‌ ಇರುತ್ತವೆ. ಇದು ನಮ್ಮ ದೇಹಕ್ಕೆ ಸೇರಿದ ಮೇಲೆ ನಮ್ಮ ದೇಹ ನಾವು ಸ್ವೀಕರಿಸುವ ಆಹಾರದಿಂದ ಕಬ್ಬಿಣಾಂಶವನ್ನ ಹೀರಿಕೊಳ್ಳುವ ಶಕ್ತಿಯನ್ನೇ ಕುಂದಿಸುತ್ತದೆ. ನಮ್ಮ ದೇಹದಲ್ಲಿ ಹರಿಯವ ರಕ್ತದಲ್ಲಿ ಕಬ್ಬಿಣಾಂಶದ ಕೊರತೆ ಕಂಡುಬಂದರೆ ಅದರಿಂದ ಹಲವಾರು ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ. ಕೆಂಪು ರಕ್ತಕಣಗಳ ರಚನೆಗೆ ಅಡ್ಡಿಪಡಿಸುವ ಕ್ಯಾಟ್ಚಿನ್ಸ್ ಎಂಬ ವಸ್ತುಗಳಿಂದ ರಕ್ತಹೀನತೆಯಂಥ ಸಮಸ್ಯೆ ಎದುರಾಗಬಹುದು. ಅನೀಮಿಯ, ನಿಶ್ಯಕ್ತಿ, ಹಿಮೋಗ್ಲೋಬಿನ್‌ ಕೊರತೆಯಂಥ ಅನೇಕಾನೇಕ ಸಮಸ್ಯೆಗಳನ್ನ ಹುಟ್ಟುಹಾಕಬಲ್ಲದು ಈ ಗ್ರೀನ್‌ ಟೀ.

ನರಮಂಡಲದ ತೊಂದರೆಗಳು

ಗ್ರೀನ್‌ ಟೀಯಲ್ಲಿಯೂ ಕೂಡ ಕೆಫೀನ್ ಇರುತ್ತದೆ, ಆದರೆ ಕಾಫಿಯಲ್ಲಿ ಇರುವುದಕ್ಕಿಂದ ಕೆಫೀನ್‌ ಅಂಶ ಸ್ವಲ್ಪ ಕಡಿಮೆಯಷ್ಟೆ. ಗ್ರೀನ್ ಟೀ ಆರೋಗ್ಯಕ್ಕೆ ಒಳ್ಳೆಯದು ಎಂಬ ಕಾರಣ್ಕೆ ಅತಿಯಾಗಿ ಸೇವಿಸಿದರೂ ಕೂಡ ಅದು ನಿದ್ರಾಹೀನತೆಯಂಥ ತೊಂದರೆಗಳಿಗೆ ನಾಂದಿಹಾಡುತ್ತದೆ. ಮೂತ್ರವಿಸರ್ಜನೆಯ ತೊಂದರೆ, ಅನಿಯಮಿತ ಹೃದಯ ಬಡಿತ, ಸ್ನಾಯು ಸೆಳೆತದಂಥ ಸಮಸ್ಯೆಗಳು ಕಾಣಿಸಿಕೊಳ್ಳಲೂಬಹುದು.

ಗರ್ಭಾವಸ್ಥೆಯ ಅಪಾಯಗಳು

ಕೆಫೀನ್ ದೇಹದಲ್ಲಿನ ಕ್ಯಾಲ್ಸಿಯಂ ಅಂಶವನ್ನು ಕಡಿಮೆ ಮಾಡುತ್ತದೆ, ಇದರಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ. ಗರ್ಭಿಣಿಯರು ಗ್ರೀನ್‌ ಟೀ ಸೇವಿಸುವುದರಿಂದ ಅವರ ದೇಹದಲ್ಲಿಯ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗಿ ಮಗುವಿಗೂ ತೊಂದರೆಯಾಗಬಹುದು. ಅಲ್ಲದೆ, ಕೆಫೀನ್, ಕ್ಯಾಟ್ಚಿನ್ಸ್ ಮತ್ತು ಟ್ಯಾನಿನ್ಗಳು ಗರ್ಭಪಾತಕ್ಕೂ ಕಾರಣವಾಗಬಲ್ಲವು. ಹೆರಿಗೆಯ ನಂತರ ತಾಯಿ ಗ್ರೀನ್‌ ಟೀ ಸೇವಿಸುವುದರಿಂದ ತಾಯಿಯ ಎದೆಹಾಲಿನ ಮೂಲಕ ಟ್ಯಾನಿನ್ಗಳು ಮತ್ತು ಕ್ಯಾಟೆಚಿನ್‌ ರಾಸಾಯನಿಕಗಳು ಶಿಶುವಿಗೆ ವರ್ಗಾವಣೆಗೊಂಡು ಅದರ ದೇಹದಲ್ಲಿಯ ಪೋಷಕಾಂಶಗಳು ಮತ್ತು ಗುಡ್ ಫ್ಯಾಟ್‌ಗಳನ್ನ ಗಣನೀಯ ಪ್ರಮಾಣದಲ್ಲಿ ಕಡಿಮೆಗೊಳಿಸಿಬಿಡುತ್ತದೆ.

ನಾವು ತೆಗೆದುಕೊಳ್ಳುವ ಔಷಧಿಯೊಂದಿಗೆ ಪ್ರತಿಕೂಲ ಪರಿಣಾಮವನ್ನು ಉಂಟುಮಾಡಬಲ್ಲದು

ಗ್ರೀನ್‌ ಟೀಯಲ್ಲಿ ಪಾಲಿಫಿನಾಲ್‌ ಎಂಬ ಅಂಶವಿರುತ್ತದೆ. ಇದು ಹಲವಾರು ಔಷಧಿಗಳೊಡನೆ ಪ್ರತಿಕ್ರಿಯಿಸಿ, ನಮ್ಮ ದೇಹದಲ್ಲಿ ಪ್ರತಿಕೂಲ ಪರಿಣಾಮವನ್ನು ಉಂಟುಮಾಡಬಲ್ಲದು. ವಿಶೇಷವಾಗಿ ನಿಕೋಟಿನ್, ಎಫೆಡ್ರೈನ್ ಮತ್ತು ಆಂಫೆಟಮೈನ್ ರೀತಿಯ ಉತ್ತೇಜಕ ಔಷಧಗಳು ಗ್ರೀನ್‌ ಟೀಯೊಂದಿಗೆ ಪ್ರತಿಕ್ರಿಯಿಸಿ, ಅನಾರೋಗ್ಯಕ್ಕೆ ಕಾರಣವಾಗಬಲ್ಲದು.

ಕಣ್ಣಿಗೆ ಸಂಬಂಧಿಸಿದ ಗ್ಲೂಕೋಮಾ ರೋಗಕ್ಕೆ ತುತ್ತಾದವರು ಗ್ರೀನ್‌ ಟೀ ಕುಡಿಯಲೇಬಾರದು

ಗ್ಲೂಕೋಮಾ ಕಾಯಿಲೆಯ ಲಕ್ಷಣವೇನೆಂದರೆ ಕಣ್ಣಿನ ನರಗಳು ದುರ್ಬಲಗೊಳ್ಳುವುದು. ಗ್ಲೋಕೋಮಾ ರೋಗಿಗಳು ಗ್ರೀನ್‌ ಟೀ ಕುಡಿಯುವುದರಿಂದ ಅದರಲ್ಲಿರುವ ಕೆಫೀನ್‌ ಕಣ್ಣಿನ ಒಳನಾಳಗಳಲ್ಲಿ ಒತ್ತಡ ಹೆಚ್ಚಿಸುವುದರಿಂದ ಅಪಾಯ ಜಾಸ್ತಿ ಎನ್ನಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...