ಎಳನೀರು ಕುಡಿಯುವುದು ತುಂಬಾ ಒಳ್ಳೆಯದು ಎಂಬ ಕಾರಣಕ್ಕೆ ಮಳೆಗಾಲ, ಚಳಿಗಾಲದಲ್ಲಿ ಕುಡಿಯದಿರಿ. ಇದರಿಂದ ನೆಗಡಿ, ಜ್ವರ ಬರುವ ಸಾಧ್ಯತೆಗಳೇ ಹೆಚ್ಚು. ಗರ್ಭಾವಸ್ಥೆಯಲ್ಲಿ ಎಳೆನೀರನ್ನು ಕುಡಿಯುವುದರಿಂದ ಪೋಷಕಾಂಶಗಳು, ಮೆಗ್ನಿಶಿಯಮ್, ಕ್ಯಾಲ್ಸಿಯಂ, ರಿಪೋಬ್ಲ್ಯಾವಿನ್ ಮತ್ತು ವಿಟಮಿನ್ ಸಿ ಹೇರಳವಾಗಿ ಸಿಗುತ್ತದೆ.
ಎಳನೀರಲ್ಲಿ ಪ್ರೊಟೀನ್ ಮತ್ತು ಸೋಡಿಯಮ್ ಅಂಶ ಹೆಚ್ಚಾಗಿ ಇರುವುದರಿಂದ ಇದನ್ನು ಗರ್ಭಿಣಿಯರು ಕುಡಿಯುವುದರಿಂದ ಸೋಂಕುಗಳಿಂದ ರಕ್ಷಣೆ ಪಡೆಯಬಹುದು. ರೋಗನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ. ಇದರಲ್ಲಿ ಹೆಚ್ಚಿನ ಒಮೆಗಾ3, ಕೊಬ್ಬಿನ ಆಮ್ಲಗಳು ಕಂಡು ಬರುವುದರಿಂದ ಗರ್ಭಿಣಿ ಮಹಿಳೆಯರಿಗೆ ತುಂಬಾ ಒಳ್ಳೆಯದು.
ಎದೆ ಉರಿಯನ್ನು ಕಡಿಮೆ ಮಾಡುತ್ತದೆ. ವಾಂತಿ, ತಲೆ ಸುತ್ತು, ಇವೆಲ್ಲವನ್ನು ಕಡಿಮೆ ಮಾಡುತ್ತದೆ ಇದೊಂದು ದೈಹಿಕ ಮತ್ತು ಪೌಷ್ಟಿಕ ಪಾನಿಯವಾಗಿದೆ. ಹಾಗಾಗಿ ಗರ್ಭಿಣಿಯರು ವಾರದಲ್ಲಿ ಎರಡು ಬಾರಿ ಎಳನೀರನ್ನು ಸೇವಿಸುವುದು ತುಂಬಾ ಒಳ್ಳೆಯದು.