ಲಿವರ್ ದೇಹದ ಮುಖ್ಯ ಅಂಗ. ಇದು ದೇಹದಲ್ಲಿ ಆಹಾರವನ್ನು ಜೀರ್ಣಗೊಳಿಸುವ ಕ್ರಿಯೆ, ದೇಹಕ್ಕೆ ಬೇಕಾದಂತಹ ಗ್ಲೂಕೋಸ್, ಕೊಬ್ಬು, ಪ್ರೊಟೀನ್ ಗಳನ್ನು ಸಂಗ್ರಹಿಸುವ ಮತ್ತು ದೇಹದ ವಿಷ ಪದಾರ್ಥಗಳನ್ನು ಹೊರಹಾಕುವ ಕ್ರಿಯೆಯನ್ನು ನಿರ್ವಹಿಸುತ್ತದೆ.
ಫ್ಯಾಟಿ ಲಿವರ್ ಎಂದರೆ ಲಿವರ್ ನ ಜೀವಕೋಶಗಳಲ್ಲಿ ಕೊಬ್ಬು ಹೆಚ್ಚಾಗಿ ಸಂಗ್ರಹಗೊಳ್ಳುವಂಥದ್ದು. ಈ ಸಮಸ್ಯೆಯಿಂದ ಪಾರಾಗಲು ಹಲವು ವಿಧಾನಗಳನ್ನು ಅನುಸರಿಸಿ.
* ಆಹಾರಕ್ರಮದಲ್ಲಿ ಬದಲಾವಣೆಯನ್ನು ತಂದುಕೊಳ್ಳಿ. ಪ್ರತಿದಿನ ಯೋಗಾಭ್ಯಾಸವನ್ನು ಮಾಡಿ. ಒತ್ತಡ ರಹಿತ ಜೀವನವನ್ನು ನಿಮ್ಮದಾಗಿಸಿಕೊಳ್ಳಿ.
* ದಿನಕ್ಕೆ ಕೇವಲ ಎರಡು ಬಾರಿ ಮಾತ್ರ ಆಹಾರ ತೆಗೆದುಕೊಳ್ಳಿ. ಇದರಿಂದ ಜೀರ್ಣಾಂಗವ್ಯೂಹಕ್ಕೆ ಸಾಕಷ್ಟು ಸಮಯ ದೊರೆತು ಆಹಾರ ಸಂಪೂರ್ಣವಾಗಿ ಜೀರ್ಣವಾಗುತ್ತದೆ.
* ಸಾಧ್ಯವಾದಷ್ಟು ತರಕಾರಿ ಸಲಾಡ್, ಎಣ್ಣೆಯಿಲ್ಲದ ಚಪಾತಿ, ತರಕಾರಿ ಸೂಪ್, ಉಗಿಯಲ್ಲಿ ಬೇಯಿಸಿದ ಆಹಾರ, ಎಣ್ಣೆ ರಹಿತ ತಿನಿಸು ಸೇವಿಸಿ.
* ಊಟಕ್ಕೂ ಮುಂಚೆ ಹಣ್ಣುಗಳನ್ನು ಸೇವಿಸುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದು ಫ್ಯಾಟಿ ಲಿವರ್ ಸಮಸ್ಯೆಯನ್ನು ತಡೆಗಟ್ಟುತ್ತದೆ.
* ಪ್ರತಿ ದಿನ ತಪ್ಪದೆ ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ತಾಜಾ ತರಕಾರಿ ಅಥವಾ ಹಣ್ಣಿನ ರಸ ಸೇವನೆ ಮಾಡಿ.
* ತಣ್ಣೀರಿನ ಸ್ನಾನ, ಸೂರ್ಯ ನಮಸ್ಕಾರ, ಹಿತಮಿತವಾದ ಆಹಾರವು ಫ್ಯಾಟಿ ಲಿವರ್ ಸಮಸ್ಯೆಯಿಂದ ದೂರವಿರಿಸುತ್ತದೆ.