alex Certify ‘ಫ್ಯಾಟಿ ಲಿವರ್’ ಸಮಸ್ಯೆಯೇ….? ಇಲ್ಲಿದೆ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಫ್ಯಾಟಿ ಲಿವರ್’ ಸಮಸ್ಯೆಯೇ….? ಇಲ್ಲಿದೆ ಪರಿಹಾರ

Fatty liver disease: What it is and what to do about it - Harvard Health Blog - Harvard Health Publishing

ನಮ್ಮ ಜೀವನ ಶೈಲಿ, ತಿನ್ನುವ ಆಹಾರ ಇತ್ಯಾದಿಗಳಿಂದ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಒಂದು ಫ್ಯಾಟಿ ಲಿವರ್. ಈ ಸಮಸ್ಯೆ ಹೆಚ್ಚಿನವರನ್ನು ಕಾಡುತ್ತಿರುತ್ತದೆ. ಸುಲಭವಾಗಿ ಇದನ್ನು ನಿವಾರಿಸಿಕೊಳ್ಳಲು ಈ ವಿಧಾನ ಅನುಸರಿಸಿ.

ಲಿವರ್ ನಲ್ಲಿ ಕೊಬ್ಬು ಸಂಗ್ರಹವಾಗುವುದರಿಂದ ಇದಕ್ಕೆ ಫ್ಯಾಟಿ ಲಿವರ್ ಎಂದು ಕರೆಯುತ್ತಾರೆ. ಇದನ್ನು ಡಯೆಟ್, ವ್ಯಾಯಾಮ, ಹಾಗೂ ಹೆಚ್ಚೆಚ್ಚು ತರಕಾರಿ, ಸಲಾಡ್ ಗಳನ್ನು ತಿನ್ನುವ ಮೂಲಕ ಸರಿಪಡಿಸಿಕೊಳ್ಳಬಹುದು.

ಸಕ್ಕರೆ, ಜಂಕ್ ಫುಡ್ ಗಳನ್ನು ಆದಷ್ಟು ಕಡಿಮೆ ಮಾಡಿದರೆ ಇದನ್ನು ಬೇಗ ಗುಣಪಡಿಸಿಕೊಳ್ಳಬಹುದು.

ಆದಷ್ಟು ನಿಮ್ಮ ದೇಹವನ್ನು ಡಿಟಾಕ್ಸಾಫಿಕೇಷನ್ ಮಾಡಿಕೊಳ್ಳುತ್ತಾ ಇರಬೇಕು. ಬೆಳಿಗ್ಗೆ ತಿಂಡಿ ತಿಂದ 45 ನಿಮಿಷಗಳು ಆದ ನಂತರ ಒಂದು ಗ್ಲಾಸ್ ಬಿಸಿ ನೀರಿಗೆ 30 ಮಿಲೀ ಲೀಟರ್ ಹರಳೆಣ್ಣೆಯನ್ನು ಮಿಕ್ಸ್ ಮಾಡಿಕೊಂಡು ಕುಡಿಯಿರಿ. ಇದು ಕುಡಿದ ನಂತರ ಮನೆಯಲ್ಲಿಯೇ ಇರಿ. ಇದು ಕುಡಿಯುವುದರಿಂದ ಭೇದಿ ಆಗುತ್ತದೆ. ಇದು ನಿಮ್ಮ ದೇಹದಲ್ಲಿರುವ ಕಲ್ಮಶಗಳನ್ನೆಲ್ಲಾ ಹೊರಕ್ಕೆ ಹಾಕುತ್ತದೆ.

ಆದರೆ ಕಿಡ್ನಿ ಸಮಸ್ಯೆ, ಹೃದಯದ ಸಮಸ್ಯೆ ಇನ್ನಿತರ ಗಂಭೀರ ಅನಾರೊಗ್ಯ ಸಮಸ್ಯೆ ಇರುವವವರು ಇದನ್ನು ಮಾಡದೇ ಇರುವುದು ಒಳ್ಳೆಯದು. ಭೇದಿ ನಂತರ ಯಾವುದೇ ಕಾರಣಕ್ಕೂ ಘನ ಆಹಾರ ಸೇವಿಸಬೇಡಿ. ಗಂಜಿ, ಬೇಯಿಸಿದ ತರಕಾರಿಗಳನ್ನು ಸೇವಿಸಿ.

ಇದಲ್ಲದೇ, 1 ಲೋಟ ಉಗುರು ಬೆಚ್ಚಗಿನ ನೀರಿಗೆ 1 ಟೇಬಲ್ ಸ್ಪೂನ್ ಆ್ಯಪಲ್ ಸೈಡರ್ ವಿನೇಗರ್, 1 ಚಮಚ ಲಿಂಬೆಹಣ್ಣಿನರಸ ಸೇರಿಸಿ ಕುಡಿದರೆ ಫ್ಯಾಟಿ ಲಿವರ್ ಸಮಸ್ಯೆ ಕಡಿಮೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...