ನಿಮ್ಮ ತ್ವಚೆ ವಿಪರೀತ ಡ್ರೈ ಆಗಿದೆಯೇ. ಈ ಕೆಳಗಿನ ವಸ್ತುಗಳ ಸೇವನೆಯಿಂದ ದೂರವಿರುವ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಮದ್ಯಪಾನ ಸೇವನೆ ಮಾಡುವುದರಿಂದ ನಿಮ್ಮ ತ್ವಚೆಯಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತವೆ. ತ್ವಚೆ ಒಣಗಿ ಹೋಗುತ್ತದೆ. ಇದು ದೇಹದ ನೀರಿನಂಶವನ್ನೆಲ್ಲಾ ಹೀರಿಕೊಂಡು ಸ್ನಾಯು ಮತ್ತು ತ್ವಚೆಯನ್ನು ಹಾಳು ಮಾಡುತ್ತವೆ.
ಸೋಡಾ ಹಾಗೂ ಕೆಫಿನ್ ಹೊಂದಿರುವ ಪಾನೀಯಗಳನ್ನು ದಿನಕ್ಕೆ ಎರಡು ಬಾರಿ ಕುಡಿದರೆ ಸಾಕು. ಅದಕ್ಕಿಂತ ಹೆಚ್ಚು ಬಾರಿ ಸೇವಿಸಿದರೆ ಡ್ರೈಸ್ಕಿನ್ ಸಮಸ್ಯೆ ನಿಮ್ಮನ್ನು ಕಾಡಬಹುದು.
ಎಣ್ಣೆಯಲ್ಲಿ ಕರಿದ ವಸ್ತುಗಳಿಂದ ಸಾಧ್ಯವಾದಷ್ಟು ದೂರವಿರಿ. ಮೀನು, ಆಕ್ರೋಟ್, ನಾರಿನಂಶ ಇರುವ ಧಾನ್ಯಗಳು ಮತ್ತು ತರಕಾರಿಗಳನ್ನು ಸೇವಿಸಿ.