ಹೆಚ್ಚಿನವರು ಬೆಳಿಗ್ಗೆಯನ್ನು ಕಾಫಿ ಕುಡಿಯುವುದರ ಮೂಲಕ ಶುರು ಮಾಡುತ್ತಾರೆ. ಟೀ ಹೋಲಿಸಿದರೆ ಕಾಫಿ ಆರೋಗ್ಯಕ್ಕೆ ಉತ್ತಮ. ಆದರೆ ಅದನ್ನು ಅತಿಯಾಗಿ ಸೇವಿಸಬಾರದು. ಹಾಗೇ ತೂಕ ಇಳಿಸಲು ಬಯಸುವವರು ಬ್ಲ್ಯಾಕ್ ಕಾಫಿಯನ್ನು ಸೇವಿಸಬಹುದು ಎನ್ನಲಾಗಿದೆ.
*ಕಾಫಿಯಲ್ಲಿರುವ ಕೆಫೀನ್ ಅಂಶ ಚಯಾಪಚಯ ಚಟುವಟಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಕ್ಯಾಲೋರಿಯನ್ನು ಸುಡುತ್ತದೆ. ಕೆಫೀನ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
*ಕಾಫಿ ಹಸಿವನ್ನು ನಿಗ್ರಹಿಸುತ್ತದೆ. ಹಸಿವು ಹೆಚ್ಚಿಸುವ ಹಾರ್ಮೋನ್ ಗಳ ವಿರುದ್ಧ ಇದು ಹೋರಾಡುತ್ತದೆ. ಹಸಿವು ಕಡಿಮೆಯಾಗುವುದರಿಂದ ನೀವು ತಿನ್ನುವ ಪ್ರಮಾಣ ಕಡಿಮೆಯಾಗಿ ತೂಕ ನಷ್ಟವಾಗುತ್ತದೆ.
*ದೇಹದ ತೂಕ ಹೆಚ್ಚಳಕ್ಕೆ ಕಾರಣವಾಗುವ ಹೆಚ್ಚುವರಿ ನೀರಿನ ಅಂಶವನ್ನು ಕಡಿಮೆ ಮಾಡುತ್ತದೆ. ಆಗಾಗ ಮೂತ್ರ ವಿಸರ್ಜನೆ ಮಾಡುವಂತೆ ಪ್ರೇರೆಪಿಸುತ್ತದೆ.