ವೈಯಕ್ತಿಕ ಗುರುತಿನ ಅತಿ ಮುಖ್ಯ ಸಾಕ್ಷ್ಯವಾದ ಆಧಾರ್ ಕಾರ್ಡ್ ಇಲ್ಲದೇ ಸರ್ಕಾರಿ ಸೇವೆಗಳನ್ನು ಪಡೆದುಕೊಳ್ಳುವುದನ್ನು ಊಹಿಸುವುದೂ ಕಷ್ಟ.
ಪ್ರತಿಯೊಬ್ಬ ವ್ಯಕ್ತಿಗೆ ಒಂದೇ ಒಂದು ಆಧಾರ್ ಸಂಖ್ಯೆಯನ್ನು ನೀಡಲು ಸಾಧ್ಯ. ಪ್ರತಿಯೊಬ್ಬ ವ್ಯಕ್ತಿಯ ಬಯೋಮೆಟ್ರಿಕ್ಸ್‌ನೊಂದಿಗೆ ಸಂಪರ್ಕ ಹೊಂದಿರುವ ಕಾರಣದಿಂದಾಗಿ ಯಾವುದೇ ನಿವಾಸಿಯು ನಕಲಿ ಆಧಾರ್ ಹೊಂದುವುದು ಅಸಾಧ್ಯವಾಗಿದೆ.
BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; ಒಂದೇ ದಿನದಲ್ಲಿ 267 ಜನ ಬಲಿ
ನಿಮಗೂ ನೀಡಲಾಗಿರುವ 12 ಅಂಕಿಯ ಈ ಗುರುತಿನ ಸಂಖ್ಯೆ ಅಸಲಿಯೋ ನಕಲಿಯೋ ಅರಿಯಲು ಕೆಳಕಂಡ ಕ್ರಮಗಳನ್ನು ಅನುಸರಿಸಿ:
– ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಜಾಲತಾಣಕ್ಕೆ ಭೇಟಿ ನೀಡಿ — uidai.gov.in
– ಡ್ರಾಪ್‌ಡೌನ್ ಮೆನುವಿನಿಂದ ‘Aadhaar Services’ ಆಯ್ಕೆ ಮಾಡಿ.
– ಈಗ ‘Aadhaar Verification’ ಟ್ಯಾಬ್ ಆಯ್ಕೆ ಮಾಡಿ.
– ಈಗ ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆ ಎಂಟರ್ ಮಾಡಿ.
– ಕ್ಯಾಪ್ಚಾ ಹಾಗೂ ಭದ್ರತಾ ಕೋಡ್‌ಅನ್ನು ಪಂಚ್ ಮಾಡಿ.
– ‘Submit’ ಮೇಲೆ ಕ್ಲಿಕ್ ಮಾಡಿ.
– ಈಗ ಪೇಜ್‌ನಲ್ಲಿ ನಿಮ್ ಆಧಾರ್ ಕುರಿತ ಮಾಹಿತಿ ಕಾಣಸಿಗಲಿದೆ.
ಭಾರತಾದ್ಯಂತ ಸಾರ್ವತ್ರಿಕ ಕೆವೈಸಿ ದಾಖಲೆಯಾದ ಆಧಾರ್ ಖಾತ್ರಿಪಡಿಸುವಿಕೆ ಬಹು ಮುಖ್ಯವಾದ ಪ್ರಕ್ರಿಯೆಯಾಗಿದೆ.