ಚಳಿಗಾಲದಲ್ಲಿ ತ್ವಚೆಯ ಸಮಸ್ಯೆಗಳತ್ತ ಗಮನ ಹರಿಸಬೇಕಾದ್ದು ಬಹಳ ಮುಖ್ಯ. ಹೀಗಿದ್ದೂ ಚಳಿಗಾಲದಲ್ಲಿ ಮೊಡವೆ ಸಮಸ್ಯೆ ಅತಿಯಾಗಿ ಕಾಣಿಸಿಕೊಂಡರೆ ಅದಕ್ಕೆ ಹೀಗೆ ಮಾಡಿ.
ಚಳಿಗಾಲದಲ್ಲಿ ವಿಪರೀತ ಬಿಸಿಲಿಗೆ ಒಗ್ಗಿಕೊಳ್ಳುವುದು ಮೊಡವೆ ಸಮಸ್ಯೆ ಹೆಚ್ಚಲು ಕಾರಣವಾಗಿರಬಹುದು. ಹಾಗಾಗಿ ಸೂರ್ಯನ ಬಿಸಿಲಿಗೆ ಒಗ್ಗಿಕೊಳ್ಳುವುದನ್ನು ಕಡಿಮೆ ಮಾಡಿ. ಮೊಡವೆ ಸಮಸ್ಯೆ ಕಡಿಮೆ ಮಾಡಲು ಎಣ್ಣೆಯಂಶ ಇಲ್ಲದ ಮಾಯಿಸ್ಚರೈಸರ್ ಬಳಸಿ. ಇದು ನಿಮ್ಮ ತ್ವಚೆಯನ್ನು ರಕ್ಷಿಸುತ್ತದೆ.
ಪದೇ ಪದೇ ಬಾರ್ ಸೋಪುಗಳನ್ನು ಬಳಸುವ ಬದಲು ಸ್ಕಿನ್ ಕ್ಲೆನ್ಸರ್ ಆಯ್ಕೆ ಮಾಡಿ. ನಿಮ್ಮ ಮುಖವನ್ನು ಪದೇ ಪದೇ ತೊಳೆಯುವ ಅಭ್ಯಾಸ ಬಿಟ್ಟುಬಿಡಿ. ತ್ವಚೆ ಒಡೆಯಲು ಮನಸ್ಸಿನ ಒತ್ತಡವೂ ಒಂದು ಕಾರಣವಿರಬಹುದು. ಹಾಗಾಗಿ ಒತ್ತಡ ರಹಿತವಾಗಿ ಬದುಕಲು ಕಲಿಯಿರಿ.
ಇಡೀ ದಿನ ಮುಖವನ್ನು ಮುಟ್ಟುತ್ತಿರಬೇಡಿ. ಹ್ಯಾಂಡ್ ಕ್ರೀಮ್ ಅಥವಾ ಬಾಡಿ ಲೋಷನ್ ಗಳನ್ನು ಹಚ್ಚಿಕೊಂಡರೆ ಮೊಡವೆ ಹೆಚ್ಚುತ್ತದೆ. ಮೊಡವೆಯನ್ನು ಕೀಳುವುದು ಅಥವಾ ಹಿಂಡಿ ರಕ್ತ ಹೊರಬರುವಂತೆ ಮಾಡದಿರಿ.