ಬೀಜಿಂಗ್: ಚೀನಾದಲ್ಲಿ ಹೊಸ ಸಾಂಕ್ರಾಮಿಕ ರೋಗದಿಂದಾಗಿ ಆಸ್ಪತ್ರೆಗಳೆಲ್ಲಾ ಭರ್ತಿಯಾಗಿವೆ ಎಂದು ಜಾಲಾತಾಣಗಳಲ್ಲಿ ಭಾರಿ ಸುದ್ದಿಯಾಗಿದೆ.
ಚೀನಾದಲ್ಲಿ ಹೊಸ ಸಾಂಕ್ರಾಮಿಕ ರೋಗ ಹರಡಿದೆ ಎಂದು ಕೆಲವು ಬಳಕೆದಾರರು ಕಿಕ್ಕಿರಿದ ಆಸ್ಪತ್ರೆಗಳ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ, ಇನ್ಫ್ಲುಯೆನ್ಸ A, HMPV, ಮೈಕೋಪ್ಲಾಸ್ಮಾ ನ್ಯುಮೋನಿಯಾ, ಮತ್ತು COVID-19 ಸೇರಿದಂತೆ “ಬಹು ವೈರಸ್‌ಗಳು” ಕ್ಷಿಪ್ರವಾಗಿ ಹರಡುತ್ತವೆ ಎಂದು ಹೇಳಲಾಗಿದೆ.
ಚೀನಾ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ.
ಕೊರೋನಾದಂತಹ ಮತ್ತೊಂದು ವೈರಸ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದಿದೆ. ಮತ್ತೊಮ್ಮೆ ಹೆಲ್ತ್ ಎಮರ್ಜೆನ್ಸಿ ಘೋಷಣೆ ಮಾಡಲಾಗಿದೆ. ಚೀನಾದಲ್ಲಿ ರೋಗಿಗಳಿಂದ ಆಸ್ಪತ್ರೆಗಳೆಲ್ಲ ಭರ್ತಿಯಾಗಿದೆ ಎಂದು ಪೋಸ್ಟ್ ಮಾಡಲಾಗಿದೆ. ಆದರೆ, ಈ ಪೋಸ್ಟ್ ಗಳಿಗೆ ಯಾವುದೇ ಆಧಾರವಿಲ್ಲ. ಹೊಸ ವೈರಸ್ ಬಗ್ಗೆ ಚೀನಾದಿಂದ ಯಾವುದೇ ಸ್ಪಷ್ಟನೆ ನೀಡಲಾಗಿಲ್ಲ.
ಆದಾಗ್ಯೂ, ಇವು ಅಧಿಕೃತ ಮಾಹಿತಿಗಳಲ್ಲ, ಚೀನಾ ಆಡಳಿತದಿಂದ ಇದನ್ನು ದೃಢಪಡಿಸಿಲ್ಲ. ಚೀನಾದ ಆರೋಗ್ಯ ಅಧಿಕಾರಿಗಳು ಅಥವಾ ವಿಶ್ವ ಆರೋಗ್ಯ ಸಂಸ್ಥೆ(WHO) ಕೂಡ ಸಾಂಕ್ರಾಮಿಕ ಅಥವಾ ತುರ್ತು ಪರಿಸ್ಥಿತಿಯನ್ನು ದೃಢಪಡಿಸಿಲ್ಲ.
⚠️ BREAKING:
China 🇨🇳 Declares State of Emergency as Epidemic Overwhelms Hospitals and Crematoriums.
Multiple viruses, including Influenza A, HMPV, Mycoplasma pneumoniae, and COVID-19, are spreading rapidly across China. pic.twitter.com/GRV3XYgrYX
— SARS‑CoV‑2 (COVID-19) (@COVID19_disease) January 1, 2025
Absolutely NOT.
We are NOT doing this again.
“China Declares State of Emergency as Epidemic Overwhelms Hospitals and Crematoriums. Multiple viruses, including Influenza A, HMPV, Mycoplasma pneumoniae, and COVID-19, are spreading rapidly across China…” pic.twitter.com/WWmks4jOpK
— Liz Churchill (@liz_churchill10) January 1, 2025