alex Certify ತಲೆ ತುರಿಕೆಯ ಕಿರಿಕಿರಿಯೇ…..? ಹೀಗೆ ಹೇಳಿ ʼಗುಡ್ ಬೈʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆ ತುರಿಕೆಯ ಕಿರಿಕಿರಿಯೇ…..? ಹೀಗೆ ಹೇಳಿ ʼಗುಡ್ ಬೈʼ

ಸಾಕಷ್ಟು ಜನರಲ್ಲಿ ಈ ತಲೆ ತುರಿಕೆ ಸಮಸ್ಯೆ ಕಂಡುಬರುತ್ತದೆ. ನಿರಂತರ ತುರಿಕೆಯಿಂದ ತಲೆಯಲ್ಲಿ ಕಜ್ಜಿ, ಗಾಯಗಳು ಅಗುವುದೂ ಉಂಟು.

ಹೇನು, ಹೊಟ್ಟು ಸಮಸ್ಯೆ ಇಲ್ಲದವರಲ್ಲೂ ಕಾಣಿಸಿಕೊಳ್ಳುವ ಈ ತುರಿಕೆ ಕಡಿಮೆ ಎಂದರೆ ಅರು ವಾರಗಳ ತನಕ ಕಾಡುತ್ತದೆ. ತಲೆ ಬುಡದಲ್ಲಿ ಶಿಲೀಂಧ್ರಗಳು ಕಾಣಿಸಿಕೊಳ್ಳುವುದರಿಂದ ಬಿಳಿಯಾದ ಪ್ಯಾಚ್ ಗಳು ಮೊದಲಿಗೆ ಮೂಡಿ ಬಳಿಕ ಅದು ಹೊಟ್ಟಾಗಿ ಬದಲಾಗುತ್ತದೆ. ಇದರಿಂದ ತಲೆತುರಿಕೆ ಹೆಚ್ಚುತ್ತದೆ.

ಸೊರಿಯಾಸಿಸ್ ಸಮಸ್ಯೆ ಇರುವವರಲ್ಲಿ ದೇಹದಲ್ಲಿ ಮಾತ್ರವಲ್ಲ ತಲೆಯಲ್ಲೂ ತುರಿಕೆ ಕಂಡು ಬರುತ್ತದೆ. ಅಲರ್ಜಿ ಒಣಚರ್ಮ, ವಿಪರೀತ ಸೆಖೆ ಹಾಗೂ ಬೆವರಿನಿಂದಲೂ ಇದು ಕಾಣಿಸಿಕೊಳ್ಳುತ್ತದೆ.

ತಲೆತುರಿಕೆಯೊಂದಿಗೆ ಕೂದಲು ಉದುರುವುದು, ವೈಟ್ ಪ್ಯಾಚಸ್, ಊತ, ಸಣ್ಣ ಪ್ರಮಾಣದ ಜ್ವರ ಇದ್ದರೆ ವೈದ್ಯರನ್ನು ಕಾಣುವುದು ಉಚಿತ. ತಲೆ ತುರಿಕೆ ಎರಡು ವಾರಕ್ಕೂ ಮುಂದುವರಿದರೆ ವೈದ್ಯರನ್ನು ಭೇಟಿ ಮಾಡಿ.

ತಲೆಯ ಬುಡಕ್ಕೆ ಬಿಸಿ ಮಾಡಿದ ಎಣ್ಣೆಯಿಂದ ಮಸಾಜ್ ಮಾಡುವುದು ಇದಕ್ಕಿರುವ ಅತ್ಯುತ್ತಮ ಪರಿಹಾರ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...