ಬೆಂಗಳೂರು : ದೇವರು’, ‘ದೇವ-ಮಾನವರ’ ಮೇಲಿನ ಅವಿವೇಕದ ನಂಬಿಕೆಯೇ ಇಂತಹ ದುರಂತಕ್ಕೆ ಕಾರಣ ಎಂದು ನಟ ಚೇತನ್ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ.
ಹತ್ರಾಸ್ ಕಾಲ್ತುಳಿತ ದುರಂತದಲ್ಲಿ 124 ಮಂದಿ ಮೃತಪಟ್ಟಿದ್ದು, ಈ ಬಗ್ಗೆ ನಟ ಚೇತನ್ ಅಹಿಂಸಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
”ಉತ್ತರ ಪ್ರದೇಶದ ಹತ್ರಾಸ್ನಲ್ಲಿನ ಧಾರ್ಮಿಕ ಸಭೆಯಲ್ಲಿ ನಿನ್ನೆ ಸಂಭವಿಸಿದ ಕಾಲ್ತುಳಿತವು 122 ಜನರನ್ನು ಬಲಿ ತೆಗೆದುಕೊಂಡಿತು, ಇದರಲ್ಲಿ ಬಹುತೇಕರು ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ದೇವರು ಮತ್ತು ‘ದೇವ-ಮಾನವರು’ ಮೇಲಿನ ಅವಿವೇಕದ ನಂಬಿಕೆಯೇ ಇಂತಹ ದುಃಖದ ಸಾವುಗಳಿಗೆ ಕಾರಣವಾಯಿತು.
ನಾವು ನಿಜವಾದ ತರ್ಕಬದ್ಧ ಮನಸ್ಸುಗಳನ್ನು ಬೆಳೆಸುವವರೆಗೆ ಭಾರತವು ಒಂದು ರಾಷ್ಟ್ರವಾಗಿ ಕುಂಠಿತ ಬೆಳವಣಿಗೆಯನ್ನು ಹೊಂದಿರುತ್ತದೆ” ಎಂದು ಹೇಳಿದ್ದಾರೆ.