ಕೊರೊನಾ ಕವಚ್ ಹಾಗೂ ಕೊರೊನಾ ರಕ್ಷಕದಂಥ ಕೋವಿಡ್-ಆಧಾರಿತ ಉತ್ಪನ್ನಗಳನ್ನು ಅಲ್ಪಾವಧಿ ಮಟ್ಟಿಗೆ ಒದಗಿಸಲು ಆರೋಗ್ಯ ವಿಮೆ ಸಂಸ್ಥೆಗಳಿಗೆ ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಮಾರ್ಚ್ 31, 2022ರ ವರೆಗೂ ಅನುಮತಿ ಕೊಟ್ಟಿದೆ.
ಕೋವಿಡ್ ಭೀತಿಯಿಂದಾಗಿ ಆರೋಗ್ಯ ವಿಮಾ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಬಹಳಷ್ಟು ವಿಮಾ ಸೇವಾದಾರರು ತಮ್ಮದೇ ಆದ ಕೋವಿಡ್-ಆಧರಿತ ಉತ್ಪನ್ನ/ಸೇವೆಗಳನ್ನು ಬಿಡುಗಡೆ ಮಾಡಿವೆ.
ಇದಕ್ಕೆಂದೇ ಕೋವಿಡ್ ಕವಚ್ ಹಾಗೂ ಕೋವಿಡ್ ರಕ್ಷಕ್ ಹೆಸರಿನ ಎರಡು ನಿರ್ದಿಷ್ಟ ಉತ್ಪನ್ನಗಳನ್ನು ವಿಮಾ ನಿಯಂತ್ರಕ ಪರಿಚಯಿಸಿದೆ.
ಕೊರೊನಾ ವೈರಸ್‌ನ ವೈದ್ಯಕೀಯ ವೆಚ್ಚಗಳನ್ನು ಭರಿಸಲು ವಿಮಾ ಪಾಲಿಸಿ ಇಲ್ಲ. ಹೀಗಾಗಿ ದೊಡ್ಡ ಪ್ರಮಾಣದ ಜನಸಂಖ್ಯೆಯ ನೆರವಿಗೆ ಬಂದಿರುವ ಐಆರ್‌ಡಿಎಐ, ಎಲ್ಲಾ ಸಾಮಾನ್ಯ ಹಾಗೂ ಆರೋಗ್ಯ ವಿಮಾ ಕಂಪನಿಗಳಿಗೂ ಕೋವಿಡ್ ಆಧರಿತವಾದ ಎರಡು ನಿರ್ದಿಷ್ಟ ಸೇವೆಗಳನ್ನು ಒದಗಿಸಲು ಸೂಚಿಸಿದೆ.
ಹಣ ಗಳಿಸುವ ಅವಕಾಶ ನೀಡ್ತಿದೆ ಫ್ಲಿಪ್ಕಾರ್ಟ್
’ಕೊರೊನಾ ರಕ್ಷಕ್’ ಸ್ಟಾಂಡರ್ಡ್ ಆದ ಲಾಭ ಆಧರಿತ ಪಾಲಿಸಿಯಾದರೆ, ’ಕೊರೊನಾ ಕವಚ್’ ಪರಿಹಾರದ ಆಧಾರದಲ್ಲಿ ನೆರವು ಒದಗಿಸುವ ಸ್ಟಾಂಡರ್ಡ್ ಆರೋಗ್ಯ ಪಾಲಿಸಿ ಆಗಿದೆ.
’ಕೊರೊನಾ ರಕ್ಷಕ್’ ಪ್ರಕರಣದಲ್ಲಿ ಕೋವಿಡ್-19 ಸೋಂಕಿತರು, ಸತತವಾಗಿ ಕನಿಷ್ಠ 72 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿರಬೇಕು. ಹೀಗಾದಲ್ಲಿ ವಿಮಾ ಮಾಡಲಾದ ಮೊತ್ತದ 100%ರಷ್ಟನ್ನು ಒಂದೇ ಬಾರಿಗೆ ನೀಡಲಾಗುವುದು. ಕೋವಿಡ್ ಪಾಸಿಟಿವ್ ಆಗಿದೆ ಎಂದು ಸರ್ಕಾರದಿಂದ ಮಾನ್ಯತೆ ಪಡೆದ ಪರೀಕ್ಷಾ ಕೇಂದ್ರದಿಂದ ವರದಿ ಇರುವ ಮಂದಿಗೆ ’ಕೊರೋನಾ ಕವಚ್’ನಿಂದ ಆಸ್ಪತ್ರೆಯ ವೆಚ್ಚ ಭರಿಸಬಹುದಾಗಿದೆ. ಇದರಲ್ಲಿ ಆಸ್ಪತ್ರೆ ಕೋಣೆ, ದಾಖಲಾತಿ ಶುಲ್ಕ, ಗ್ಲೌವ್ಸ್, ಪಿಪಿಇ ಕಿಟ್‌ಗಳು ಹಾಗೂ ಇತರೆ ವೆಚ್ಚಗಳು ಸೇರಿವೆ.