alex Certify ನಿಸರ್ಗ ಸೌಂದರ್ಯ ಸವಿಯಲು ರೈಲ್ವೆ ಇಲಾಖೆಯಿಂದ ಟೂರ್ ಪ್ಯಾಕೇಜ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಸರ್ಗ ಸೌಂದರ್ಯ ಸವಿಯಲು ರೈಲ್ವೆ ಇಲಾಖೆಯಿಂದ ಟೂರ್ ಪ್ಯಾಕೇಜ್

ಕೆಂಪ್ಟಿ ಜಲಪಾತ, ರಿಷಿಕೇಶ್, ಮಾಂಟೆಸ್ಸರಿ, ಪಲ್ಟಾನ್ ಬಜಾರ್, ಲಕ್ಷ್ಮಣ್ ಝೂಲಾ, ಕೇದಾರನಾಥ, ಹರಿದ್ವಾರದಲ್ಲಿ ಗಂಗಾ ಆರತಿಯನ್ನು ಖುದ್ದು ಎದುರು ನಿಂತು ಕಾಣಬೇಕೇ..? ಅದು ಕೂಡ ಅಗ್ಗದ ದರದ ಪ್ರಯಾಣದಲ್ಲಿ..! ಹಾಗಿದ್ದರೆ, ಈಗಲೇ ಭಾರತೀಯ ರೈಲ್ವೆ ಇಲಾಖೆ ವತಿಯಿಂದ ಘೋಷಿಸಲಾಗಿರುವ ‘ಐಆರ್‍ಸಿಟಿಸಿ ಕೊಚ್ಚಿಯ’ ವಿಶೇಷ ಪ್ಯಾಕೇಜ್ ಟೂರ್‍ಗೆ ಹೊರಡಲು ಸಿದ್ಧರಾಗಿ. ಮ್ಯಾಗ್ನಿಫಿಶಿಯಂಟ್ ಉತ್ತರಾಖಂಡ ಪ್ಯಾಕೇಜ್ ಎಂಬ ಹೊಸ ಪ್ರವಾಸವನ್ನು ರೈಲ್ವೆ ಇಲಾಖೆ ಶುರು ಮಾಡಿದೆ.

SHOCKING NEWS: ಮಕ್ಕಳೊಂದಿಗೆ ತುಂಗಭದ್ರಾ ನದಿಗೆ ಹಾರಿ ತಾಯಿ ಆತ್ಮಹತ್ಯೆ

ಮಸ್ಸೂರಿಯಲ್ಲಿ 2 ರಾತ್ರಿ, ರಿಷಿಕೇಶದಲ್ಲಿ 1 ರಾತ್ರಿ, ಹರಿದ್ವಾರದಲ್ಲಿ ಎರಡು ರಾತ್ರಿ ತಂಗಲು ಪ್ರವಾಸ ಪ್ಯಾಕೇಜ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ ತಿಂಡಿ, ರಾತ್ರಿಯ ಊಟ ಕೂಡ ನೀಡಲಾಗುತ್ತದೆ.

ಉಳಿದಂತೆ ಪ್ರವಾಸಿ ತಾಣಗಳಲ್ಲಿನ ಆಕರ್ಷಕ ವಸ್ತುಗಳ ಖರೀದಿ, ಟಿಕೆಟ್‍ಗಳ ದರ, ಗೈಡ್‍ಗಳ ವೆಚ್ಚವನ್ನು ಪ್ರಯಾಣಿಕರು ಅಗತ್ಯವಿದ್ದರೆ ಹೆಚ್ಚುವರಿಯಾಗಿ ಭರಿಸಬಹುದಾಗಿದೆ. ಅಕ್ಟೋಬರ್ 6 ರಿಂದ ಪ್ರವಾಸದ ಬ್ಯಾಚ್‍ಗಳು ಆರಂಭವಾಗಲಿದೆ. ಸದ್ಯ ಬುಕ್ಕಿಂಗ್‍ಗೆ ಅವಕಾಶ ನೀಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...