ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ತಮ್ಮ ರೈಲು ಟಿಕೆಟ್ ಕಾಯ್ದಿರಿಸುವವರಿಗೆ ಪ್ರಮುಖ ಅಪ್‌ಡೇಟ್ ಇದೆ.
ಐ ಆರ್ ಸಿ ಟಿ ಸಿ ತನ್ನ ಆನ್‌ಲೈನ್ ಟಿಕೆಟಿಂಗ್ ಪ್ರಕ್ರಿಯೆಯನ್ನು ಪರಿಷ್ಕರಿಸಿದೆ. ಇನ್ನು ಮುಂದೆ, ಟಿಕೆಟ್‌ಗಳನ್ನು ಬುಕ್ ಮಾಡುವ ಮೊದಲು ಬಳಕೆದಾರರು ತಮ್ಮ ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿ ಪರಿಶೀಲಿಸುವುದು ಕಡ್ಡಾಯವಾಗಿದೆ. ಪರಿಶೀಲನೆ ಇಲ್ಲದೆ, ಬುಕಿಂಗ್‌ಗೆ ಅನುಮತಿ ಸಿಗುವುದಿಲ್ಲ.
ಹೂಕೋಸು ಸೇವನೆಯಿಂದ ಇದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ
ಐ ಆರ್ ಸಿ ಟಿ ಸಿ ಮೂಲಕ ಟಿಕೆಟ್ ಕಾಯ್ದಿರಿಸಲು ಮೊಬೈಲ್ ಸಂಖ್ಯೆಗಳು, ಇ-ಮೇಲ್ ಐಡಿಗಳನ್ನು ಪರಿಶೀಲಿಸುವುದು ಹೇಗೆ ಎಂದು ನೋಡುವುದಾದರೆ,
ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ಗೆ ಭೇಟಿ ನೀಡಿ ಮತ್ತು ನಂತರ ಪರಿಶೀಲನೆ ವಿಂಡೋಗೆ ನ್ಯಾವಿಗೇಟ್ ಮಾಡಬೇಕು.
ಇಲ್ಲಿ, ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸವನ್ನು ನಮೂದಿಸಬೇಕು. ಬಲಭಾಗದಲ್ಲಿ, ಪರಿಶೀಲನೆಗಾಗಿ ಆಯ್ಕೆಯನ್ನು ನೋಡಬಹುದು ಮತ್ತು ಎಡಭಾಗದಲ್ಲಿ ಎಡಿಟ್ ಬಟನ್ ಕಾಣಿಸಲಿದೆ.
ನೋಂದಾಯಿಸಿದ ಸಂಖ್ಯೆಯಲ್ಲಿ, ಒಂದು ಬಾರಿ ಪಾಸ್‌ವರ್ಡ್ (ಒಟಿಪಿ) ಸ್ವೀಕರಿಸಿದ ನಂತರ ಪರಿಶೀಲನೆಗಾಗಿ ಒಟಿಪಿ ನಮೂದಿಸಬೇಕು.
ಇ-ಮೇಲ್ ಐಡಿಗಾಗಿ ಪರಿಶೀಲನೆಯನ್ನು ಪೂರ್ಣಗೊಳಿಸುವ ಪ್ರಕ್ರಿಯೆಯು ಇದೇ ರೀತಿ ಇರಲಿದೆ. ಮೇಲ್‌ನಲ್ಲಿ ಒಟಿಪಿ ಅಥವಾ ಕೋಡ್ ಬರಲಿದೆ.
ಬಳಿಕ ಎಂದಿನಂತೆ ಬುಕಿಂಗ್ ಪ್ರಕ್ರಿಯೆ ಮುಂದುವರಿಸಬಹುದಾಗಿದೆ