
ರಕ್ಷಾಬಂಧನದ ಪ್ರಯುಕ್ತ ಮಹಿಳಾ ಪ್ರಯಾಣಿಕರಿಗೆ ವಿಶೇಷ ರಿಯಾಯಿತಿ ಘೋಷಿಸಿರುವ ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ಸಂಸ್ಥೆ (ಐಆರ್‌ಸಿಟಿಸಿ), ತೇಜಸ್ ಎಕ್ಸ್‌ಪ್ರೆಸ್ ರೈಲುಗಳ ಟಿಕೆಟ್‌ಗಳ ಮೇಲೆ ಮಹಿಳೆಯರಿಗೆ ವಿಶೇಷ ಆಫರ್‌ಗಳನ್ನು ಕೊಡಲು ನಿರ್ಧರಿಸಿದೆ.
ತೇಜಸ್ ರೈಲುಗಳ ಟಿಕೆಟ್ ದರದಲ್ಲಿ ವಿನಾಯಿತಿ ಹಾಗೂ ಕ್ಯಾಶ್ ಬ್ಯಾಕ್ ಆಫರ್‌ಗಳನ್ನು ಮಹಿಳೆಯರಿಗಾಗಿ ಐಆರ್‌ಸಿಟಿಸಿ ತರುತ್ತಿದೆ. ಲಖನೌ-ದೆಹಲಿ ಹಾಗೂ ಅಹಮದಾಬಾದ್- ಮುಂಬಯಿ ನಡುವೆ ಸಂಚರಿಸುವ ತೇಜಸ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಈ ಆಫರ್ ನೀಡಲಾಗಿದೆ.
ಕಚೇರಿಗಳಿಗೆ ಮರಳಲು ಸರ್ಕಾರಿ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ ತಾಲಿಬಾನ್
5% ಕ್ಯಾಶ್‌ಬ್ಯಾಕ್‌ನ ಈ ಆಫರ್‌ಗಳು ಆಗಸ್ಟ್ 15ರಿಂದ ಆಗಸ್ಟ್ 24ರವರೆಗೆ ಚಾಲ್ತಿಯಲ್ಲಿರಲಿವೆ. ಕೋವಿಡ್ ಲಾಕ್‌ಡೌನ್ ಬಳಿಕ ಮರಳಿ ಹಳಿಗೆ ಬಂದಿರುವ ತೇಜಸ್ ಎಕ್ಸ್‌ಪ್ರೆಸ್ ರೈಲುಗಳು 700 ಪ್ರಯಾಣಿಕರ ಸಾಮರ್ಥ್ಯದಲ್ಲಿ ಓಡುತ್ತಿದ್ದು, ಪ್ರತಿ ಪ್ರಯಾಣಿಕರಿಗೂ ವಿಶೇಷ ಕೋವಿಡ್ ಕಿಟ್ ನೀಡಲಾಗುತ್ತಿದೆ.