ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಇತ್ತೀಚೆಗೆ ವೈಷ್ಣೋದೇವಿ ಪ್ರವಾಸದ ಪ್ಯಾಕೇಜ್ ಅನ್ನು ಪರಿಚಯಿಸಿದ್ದು, ಜಮ್ಮುವಿನ ಕಟ್ರಾ ಬಳಿ ಇರುವ ಈ ತೀರ್ಥ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಪ್ರಯಾಣಿಸಲು ಅವಕಾಶ ನೀಡಿದೆ.
ಐಆರ್‌ಸಿಟಿಸಿಯ ಅಧಿಕೃತ ಜಾಲತಾಣಕ್ಕೆ ಭೇಟಿ ಕೊಟ್ಟು, ಮಾತಾ ವೈಷ್ಣೋದೇವಿಗೆ ಭೇಟಿ ನೀಡಲು 5,795 ರೂ.ಗಳ ಪ್ಯಾಕೇಜ್ ಅನ್ನು ಪ್ರವಾಸಿಗರು ಪಡೆದುಕೊಳ್ಳಬಹುದಾಗಿದೆ. ಟ್ವಿಟರ್‌ನಲ್ಲಿ ತನ್ನ ಅಧಿಕೃತ ಖಾತೆ ಮೂಲಕ ವೈಷ್ಣೋದೇವಿ ಪ್ಯಾಕೇಜ್ ಅನ್ನು ಐಆರ್‌ಸಿಟಿಸಿ ಘೋಷಿಸಿದೆ.
ಗುರುತಿಸಬಲ್ಲಿರಾ ʼಬಿಗ್ ಬಿʼ ಫೋಟೋದಲ್ಲಾಗಿರುವ ಈ ಎಡವಟ್ಟು…?
ಮೊದಲ ಟ್ರಿಪ್‌ನಲ್ಲಿ ಪ್ರಯಾಣಿಕರು ತೀರ್ಥ ಯಾತ್ರೆಯ ಆರಂಭಿಕ ನಿಲ್ದಾಣ ನವದೆಹಲಿ ರೈಲ್ವೇ ನಿಲ್ದಾಣಕ್ಕೆ ಆಗಮಿಸಬೇಕಾಗುತ್ತದೆ. ಅಲ್ಲಿಂದ ಎಸಿ-3 ಟೈರ್ ರೈಲಿನಲ್ಲಿ ಜಮ್ಮುವಿಗೆ ಪ್ರಯಾಣ.
ಎರಡನೇ ದಿನದಂದು ಪ್ರವಾಸಿಗರನ್ನು ಜಮ್ಮು ನಿಲ್ದಾಣದಿಂದ ಕಟ್ರಾಗೆ ಬಸ್‌ನಲ್ಲಿ ಕರೆದೊಯ್ಯಲಾಗುವುದು. ಕಟ್ರಾಗೆ ಆಗಮಿಸುತ್ತಲೇ ಪ್ರಯಾಣಿಕರು ಸರಸ್ವತಿ ಧಮಾದಲ್ಲಿ ವಿಶ್ರಮಿಸಲಿದ್ದು, ಮಾತಾ ವೈಷ್ಣೋದೇವಿ ದರ್ಶನಕ್ಕೆ ನೋಂದಣಿ ಚೀಟಿ ಪಡೆಯಲಿದ್ದಾರೆ. ಬಳಿಕ ಅಲ್ಲಿಂದ ಉಪಹಾರ ಸೇವನೆಗೆಂದು ಪ್ರಯಾಣಿಕರನ್ನು ಹೊಟೇಲ್‌ಗೆ ಕಳಿಸಲಾಗುತ್ತೆ.
ONLINE ವಂಚನೆಗೊಳಗಾಗಿ ಹಣ ಕಳೆದುಕೊಂಡಿದ್ದೀರಾ..? ಹಾಗಾದ್ರೆ ಮರಳಿ ಪಡೆಯಲು ಇಲ್ಲಿದೆ ಟಿಪ್ಸ್
ಅಂತಿಮವಾಗಿ, ಕೊನೆಯ ದಿನ, ಪ್ರಯಾಣಿಕರು ಮಾತಾ ವೈಷ್ಣೋದೇವಿ ಮಂದಿರದತ್ತ ಚಾರಣ ಆರಂಭಿಸಲಿದ್ದಾರೆ. ದೇವಸ್ಥಾನ ಭೇಟಿ ಬಳಿಕ ಪ್ರಯಾಣಿಕರನ್ನು ರಾತ್ರಿ ವಾಸ್ತವ್ಯಕ್ಕೆಂದು ಹೋಟೆಲ್‌ಗೆ ಕರೆತರಲಾಗುವುದು.
ಮಾರನೇ ದಿನ ಪ್ರಯಾಣಿಕರನ್ನು ಜಮ್ಮು ನಿಲ್ದಾಣಕ್ಕೆ ರವಾನೆ ಮಾಡಿ, ಅಲ್ಲಿಂದ ನವದೆಹಲಿ ರೈಲು ಹತ್ತಿಸಲಾಗುವುದು.