alex Certify ಕೈ ಕೊಟ್ಟ IRCTC ವೆಬ್‌ ಸೈಟ್;‌ ಟಿಕೆಟ್‌ ಬುಕ್‌ ಮಾಡಲು ಹೋದವರಿಂದ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈ ಕೊಟ್ಟ IRCTC ವೆಬ್‌ ಸೈಟ್;‌ ಟಿಕೆಟ್‌ ಬುಕ್‌ ಮಾಡಲು ಹೋದವರಿಂದ ಆಕ್ರೋಶ

ಭಾರತೀಯ ರೈಲ್ವೆ ಇಲಾಖೆಯ IRCTC ಆನ್‌ಲೈನ್ ಸೇವೆಗಳು ಸ್ಥಗಿತಗೊಂಡಿರುವಂತೆ ತೋರುತ್ತಿದ್ದು ಈ ಬಗ್ಗೆ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.

ಡಿಜಿಟಲ್ ಸೌಲಭ್ಯದ ಮೂಲಕ ತಮ್ಮ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತಿಲ್ಲವೆಂದು ರೈಲ್ವೆ ಪ್ರಯಾಣಿಕರು ಕಳವಳದ ಜೊತೆಗೆ ಸಿಟ್ಟು ಹೊರಹಾಕಿದ್ದಾರೆ. ಇಷ್ಟೇ ಅಲ್ಲದೇ ಇದೇನಾ ಡಿಜಿಟಲ್ ಇಂಡಿಯಾ ಎಂದು ವ್ಯಂಗ್ಯ ಮಾಡುತ್ತಾ ಮೀಮ್ಸ್ , ಟ್ರೋಲ್ ಮಾಡ್ತಿದ್ದಾರೆ.

ನಾಗರಿಕರು ತಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸಲು ಮತ್ತು ತತ್ಕಾಲ್ ಬುಕಿಂಗ್ ಸೇವೆಯನ್ನು ಪಡೆಯಲು ಪ್ರಯತ್ನಿಸುತ್ತಿರುವಾಗ ಆನ್ ಲೈನ್ ಪೋರ್ಟಲ್‌ನಲ್ಲಿ ದೋಷ ಕಂಡುಬಂದಿದೆ.

ಪದೇ ಪದೇ ಇದೇ ರೀತಿಯಾಗ್ತಿರೋದ್ರಿಂದ ಇದು ಸಾರ್ವಜನಿಕರನ್ನ ಕೆರಳಿಸಿದೆ. ಟ್ವಿಟರ್ ನಲ್ಲಿ ಈ ಬಗ್ಗೆ ಸಾಲು ಸಾಲು ಆರೋಪ ಮಾಡಿರುವ ಗ್ರಾಹಕರು ತಮ್ಮದೇ ರೀತಿಯಲ್ಲಿ ರೈಲ್ವೆ ಇಲಾಖೆಯ ಆನ್ ಲೈನ್ ಸೇವೆಯನ್ನು ಟೀಕಿಸುತ್ತಿದ್ದಾರೆ. ಏತನ್ಮಧ್ಯೆ, #ತತ್ಕಾಲ್ ಮತ್ತು #irctc ಟ್ವಿಟರ್‌ನಲ್ಲಿ ಟಾಪ್ ಟ್ರೆಂಡ್‌ಗಳಲ್ಲಿ ಸ್ಥಾನ ಪಡೆದಿವೆ.

— 🅽🅰🆁🅴🆂🅷 🅼🅰🆃🆃🅷🅴🆆7 (@nareshmatthew17) March 4, 2023

https://twitter.com/SourabhKarande8/status/1631893893167079424?ref_src=twsrc%5Etfw%7Ctwcamp%5Etweetembed%7Ctwterm%5E1631893893167079424%7Ctwgr%5Ee66aba2a7d4643a04efb6d7f8b5b422d952ee9e1%7Ctwcon%5Es1_&ref_url=https%3A%2F%2Fwww.freepressjournal.in%2Fviral%2Firctc-official-website-and-app-face-outage-during-tatkal-booking-netizens-express-their-concerns-on-twitter

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...