alex Certify ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​ : IRCTC ವೆಬ್​ಸೈಟ್​ನಲ್ಲಾಗಿದೆ ಈ ಗ್ರಾಹಕ ಸ್ನೇಹಿ ಬದಲಾವಣೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​ : IRCTC ವೆಬ್​ಸೈಟ್​ನಲ್ಲಾಗಿದೆ ಈ ಗ್ರಾಹಕ ಸ್ನೇಹಿ ಬದಲಾವಣೆ..!

ಆನ್​​ಲೈನ್​​ನಲ್ಲಿ ಕಾಯ್ದಿರಿಸಿದ ರೈಲ್ವೆ ಟಿಕೆಟ್​​ಗಳನ್ನ ರದ್ದುಗೊಳಿಸಿದ ಮೂರ್ನಾಲ್ಕು ದಿನಗಳವರೆಗೂ ಮರುಪಾವತಿಗಾಗಿ ಕಾಯುತ್ತಿದ್ದ ಪ್ರಯಾಣಿಕರಿಗೆ ಐಆರ್​ಸಿಟಿಸಿ ಗುಡ್​ ನ್ಯೂಸ್​ ನೀಡಿದೆ. ಮಾಹಿತಿಯ ಪ್ರಕಾರ ಐಆರ್​ಸಿಟಿಸಿ ಐ ಪೇ ಮೂಲಕ ಟಿಕೆಟ್​​ ಕಾಯ್ದಿರಿಸಿದವರು ಬುಕ್ಕಿಂಗ್ ರದ್ದು ಮಾಡಿದಲ್ಲಿ ತಕ್ಷಣವೇ ಅವರ ಹಣ ಬ್ಯಾಂಕ್​ ಖಾತೆಗೆ ಮರುಪಾವತಿ ಆಗಲಿದೆ. 2019ರಲ್ಲಿ ಕೇಂದ್ರ ಸರ್ಕಾರದ ಡಿಜಿಟಲ್​ ಇಂಡಿಯಾ ಅಭಿಯಾನದ ಪರವಾಗಿ ಐಆರ್​ಸಿಟಿಸಿ ಐ ಪೇಯನ್ನು ಲಾಂಚ್​ ಮಾಡಲಾಗಿತ್ತು.

ಇನ್ನು ಈ ವಿಚಾರವಾಗಿ ಮಾಹಿತಿ ನೀಡಿದ ಐಆರ್​ಸಿಟಿಸಿ ವಕ್ತಾರ ಈ ಹೊಸ ವ್ಯವಸ್ಥೆಯಿಂದಾಗಿ ಪ್ರಯಾಣಿಕರಿಗೆ ತತ್ಕಾಲ್​ ಹಾಗೂ ರೆಗ್ಯೂಲರ್​ ಟಿಕೆಟ್​ಗಳನ್ನ ತ್ವರಿತವಾಗಿ ಕಾಯ್ದಿರಿಸೋಕೆ ಸಾಧ್ಯವಾಗುತ್ತದೆ. ಐಆರ್​ಸಿಟಿಸಿ ಐ ಪೇ ಮೂಲಕ ತ್ವರಿತವಾಗಿ ಟಿಕೆಟ್​ ಬುಕ್​ ಆಗುವಂತೆ ವೆಬ್​ಸೈಟ್​ನ್ನು ನವೀಕರಿಸಿದ್ದೇವೆ ಎಂದು ಹೇಳಿದ್ರು.

ಆರ್​ಐಸಿಟಿ ಐ ಪೇ ಮೂಲಕ ಟಿಕೆಟ್​ ಬುಕ್ ಮಾಡುವ ವಿಧಾನ ಇಲ್ಲಿದೆ ನೋಡಿ :

ಐಆರ್​ಸಿಟಿಸಿ ವೆಬ್​ಸೈಟ್​ನ್ನು ಓಪನ್​ ಮಾಡಿ (www.irctc.co.in)

ಪ್ರಯಾಣ ಸಂಬಂಧಿ ಎಲ್ಲಾ ಮಾಹಿತಿಗಳನ್ನ ಒದಗಿಸಿ

ನಿಮ್ಮ ಮಾರ್ಗಕ್ಕೆ ಹೊಂದಿಕೆಯಾಗುವ ರೈಲನ್ನು ಆಯ್ಕೆ ಮಾಡಿ

ನಿಮ್ಮ ದಾಖಲೆಗಳನ್ನ ನೀಡಿ ವೆಬ್​ಸೈಟ್​​ಗೆ ಲಾಗಿನ್​ ಆಗಿ

ಪ್ರಯಾಣಿಕರ ಮಾಹಿತಿಯನ್ನ ಒದಗಿಸಿ

ಪಾವತಿಯ ಮಾರ್ಗವನ್ನ ಆಯ್ಕೆ ಮಾಡಿ. ಇಲ್ಲಿ ನೀವು ಐಆರ್​ಸಿಟಿಸಿ ಐ ಪೇ ಆಯ್ಕೆಯನ್ನ ಕ್ಲಿಕ್​ ಮಾಡಿ
ಪೇ & ಬುಕ್​ ಆಯ್ಕೆಯನ್ನ ಒತ್ತಿರಿ .

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...