ನವದೆಹಲಿ: ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಜ್ಯೋತಿರ್ಲಿಂಗ ಯಾತ್ರೆಯನ್ನು ಆರಂಭಿಸಿದೆ. ಇದೇ 15ರಿಂದ ಯಾತ್ರೆ ಆರಂಭವಾಗಿದ್ದು, ಇದು 7 ರಾತ್ರಿಗಳು ಸೇರಿ ಒಟ್ಟು 8 ದಿನಗಳ ಸುದೀರ್ಘ ಪ್ರವಾಸವನ್ನು ಒಳಗೊಂಡಿದೆ. ಇದರಲ್ಲಿ ಯಾತ್ರಿಕರು ಅತ್ಯಂತ ಪವಿತ್ರವಾದ ದೇವಾಲಯಗಳನ್ನು ಸುತ್ತಿ ಬರುತ್ತಿದ್ದಾರೆ.
ಈ ಪ್ಯಾಕೇಜ್ ಓಂಕಾರೇಶ್ವರ್, ಮಹಾಕಾಳೇಶ್ವರ್, ಸೋಮನಾಥ, ನಾಗೇಶ್ವರ್, ಭೇಟ್ ದ್ವಾರಕಾ ಮತ್ತು ಶಿವರಾಜಪುರ ಬೀಚ್ ಸೇರಿದಂತೆ ಜ್ಯೋತಿರ್ಲಿಂಗಗಳನ್ನು ಒಳಗೊಂಡಿದೆ. ಪ್ರವಾಸವು ಇದೇ 22 ರಂದು ಕೊನೆಗೊಳ್ಳುತ್ತದೆ.
ಈ ವಿಷಯವನ್ನು ಐಆರ್‌ಸಿಟಿಸಿ ತನ್ನ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. “#IRCTCTourism ನ 8D/7N ಜ್ಯೋತಿರ್ಲಿಂಗ ಯಾತ್ರೆಯೊಂದಿಗೆ ಭಾರತದ ಅತ್ಯಂತ ಪವಿತ್ರ ದೇವಾಲಯಗಳಿಗೆ ಪ್ರಯಾಣವನ್ನು ಒಳಗೊಂಡಿದೆ. ಯಾತ್ರಿಕರು ಓಂಕಾರೇಶ್ವರ್, ಮಹಾಕಾಳೇಶ್ವರ್, ಸೋಮನಾಥ, ನಾಗೇಶ್ವರ್, ಭೇಟ್ ದ್ವಾರಕಾ ಮತ್ತು ಶಿವರಾಜಪುರ ಬೀಚ್ ಸೇರಿದಂತೆ ಸ್ಥಳಗಳನ್ನು ಭೇಟಿ ಮಾಡುವುದು ಮಾತ್ರವಲ್ಲದೇ, ಗೋರಖ್‌ಪುರ, ವಾರಣಾಸಿ, ಪ್ರಯಾಗ್‌ರಾಜ್ ಸಂಗಮ್, ಲಖನೌ ಮತ್ತು ವಿರಂಗನಾ ಲಕ್ಷ್ಮಿ ಬಾಯಿ ಸೇರಿದಂತೆ ವಿವಿಧ ಆನ್‌ಬೋರ್ಡಿಂಗ್ ಮತ್ತು ಡಿ-ಬೋರ್ಡಿಂಗ್ ಪಾಯಿಂಟ್‌ಗಳನ್ನು ಹೊಂದಿರುತ್ತದೆ ಎಂದು ಟ್ವಿಟರ್ನಲ್ಲಿ ಮಾಹಿತಿ ನೀಡಲಾಗಿದೆ. ಪ್ಯಾಕೇಜ್‌ನ ಒಟ್ಟು ವೆಚ್ಚ 15,150 ರೂಪಾಯಿ ಆಗಿದೆ.