ಟೀಂ ಇಂಡಿಯಾ ಸುಮಾರು 4 ತಿಂಗಳ ಕಾಲ ಇಂಗ್ಲೆಂಡ್ ಪ್ರವಾಸದಲ್ಲಿರಲಿದೆ. ಆಟಗಾರರು ಈಗಾಗಲೇ ಇಂಗ್ಲೆಂಡ್ ವಿಮಾನವೇರಿದ್ದಾರೆ.
ಆಟಗಾರರು, ಪತ್ನಿಯನ್ನು ಇಂಗ್ಲೆಂಡ್ ಪ್ರವಾಸಕ್ಕೆ ಕರೆದುಕೊಂಡು ಹೋಗಲು ಯುಕೆ ಸರ್ಕಾರ ಬಿಸಿಸಿಐಗೆ ಅನುಮತಿ ನೀಡಿತ್ತು. ಹಾಗಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮಾ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದು ವೈರಲ್ ಆಗಿದೆ. ಈ ಫೋಟೋದಲ್ಲಿ ಅನುಷ್ಕಾ, ಕೊಹ್ಲಿ ಜೊತೆ ತೆರಳಿದ್ದಾರೆ. ಅನುಷ್ಕಾ ಜೊತೆ ಮಗಳು ವಮಿಕಾ ಕೂಡ ಇದ್ದಾಳೆ. ಖಾಸಗಿ ಚಾರ್ಟರ್ಡ್ ವಿಮಾನದಲ್ಲಿ ಆಟಗಾರರು ತೆರಳಿದ್ದು, ಆಟಗಾರರು ಮೊದಲು ಲಂಡನ್ ತಲುಪಲಿದ್ದಾರೆ.
ಜೂನ್ 18ರಿಂದ 22ರವರೆಗೆ ಭಾರತ-ನ್ಯೂಜಿಲ್ಯಾಂಡ್ ಮಧ್ಯೆ ವಿಶ್ವ ಟೆಸ್ಟ್ ಚಾಂಪಿಯನ್ ಸರಣಿಯ ಫೈನಲ್ ಪಂದ್ಯ ನಡೆಯಲಿದೆ. ಆಗಸ್ಟ್ ನಾಲ್ಕರಿಂದ ಭಾರತ-ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.