ಗಡಿ ಕಾಯುವ ಸೈನಿಕರಿಗೆ ಮನೆ, ಮಕ್ಕಳ, ಪಾಲಕರ ಬಗ್ಗೆ ಚಿಂತೆ ಕಾಡುವುದು ಸಹಜ. ಗಡಿಯಲ್ಲಿ ಕರ್ತವ್ಯದಲ್ಲಿರುವ ಅವರು, ಪತ್ನಿ, ಮಕ್ಕಳನ್ನು ಮಿಸ್ ಮಾಡಿಕೊಳ್ತಾರೆ. ಅವರ ನೆನಪು ಸದಾ ಬರುತ್ತದೆ. ಸೈನಿಕರಿಗೆ ಕಡಿಮೆ ರಜಾ ಸಿಗುವ ಕಾರಣ, ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಇಟಲಿಯ ಸೈನಿಕನೊಬ್ಬ ಕೆಲಸಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ. ಆತನ ಕಾರಣ ಸ್ವಲ್ಪ ಭಿನ್ನವಾಗಿತ್ತು.
ಮನೆ, ಮಕ್ಕಳ ಜೊತೆಯಲ್ಲ, ಪತ್ನಿಯರ ಜೊತೆ ಸಮಯ ಕಳೆಯಲು ಸಾಧ್ಯವಾಗ್ತಿಲ್ಲ ಎಂಬ ಕಾರಣಕ್ಕೆ ಆತ ಸೈನಿಕ ಕೆಲಸಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ. ಆತನಿಗೆ ಒಂದಲ್ಲ ಎರಡಲ್ಲ ಮೂವರು ಪತ್ನಿಯರು. ಪತಿಗೆ ರಜೆ ಸಿಗ್ತಿಲ್ಲ. ಆದ ಕಾರಣ ಆತನ ಜೊತೆ ನಮಗೆ ಸಮಯ ಕಳೆಯಲು ಆಗ್ತಿಲ್ಲವೆಂದು ಪತ್ನಿಯರು ಹೇಳಿದ್ದರಂತೆ. ಹಾಗಾಗಿ ಸೈನಿಕ ರಾಜೀನಾಮೆ ನೀಡಲು ಮುಂದಾಗಿದ್ದನಂತೆ. ಮೇಲಾಧಿಕಾರಿಗಳು ಆತನಿಗೆ 12 ದಿನ ರಜೆ ನೀಡಿದ್ದಾರೆ.
ಮೂವರು ಪತ್ನಿಯರ ಜೊತೆ ನಾಲ್ಕು-ನಾಲ್ಕು ದಿನ ಕಳೆಯುವಂತೆ ಹೇಳಿದ್ದಾರೆ. ಮೇಲಾಧಿಕಾರಿಗಳು ರಜೆ ನೀಡಿದ ನಂತ್ರ ಸೈನಿಕ ಮನಸ್ಸು ಬದಲಿಸಿದ್ದಾನೆ. ಕೆಲಸ ಮುಂದುವರಿಸುವ ನಿರ್ಧಾರ ಕೈಗೊಂಡಿದ್ದಾನೆ. ಆತ ಇಟಲಿಯ ಯಾವ ಜಾಗದಲ್ಲಿ ಕೆಲಸ ಮಾಡ್ತಿದ್ದಾನೆಂಬ ಬಗ್ಗೆ ಮಾಹಿತಿ ನೀಡಲಾಗಿಲ್ಲ.