ಯುಟ್ಯೂಬರ್ ಆಗಿರುವ ತನ್ನ ಮಗಳು ದೇಶ ತೊರೆಯುತ್ತಾಳೆಂದು ಇರಾಕಿ ತಂದೆ ಆಕೆಯನ್ನ ಹತ್ಯೆ ಮಾಡಿರೋ ಘಟನೆ ಟರ್ಕಿಯಲ್ಲಿ ನಡೆದಿದೆ.
ಮಗಳು ಇರಾಕ್ ಬಿಟ್ಟು ಟರ್ಕಿಯಲ್ಲೇ ಉಳಿಯಲು ನಿರ್ಧರಿಸಿದ ನಂತರ ತಂದೆ, ಮಗಳ ಕತ್ತು ಹಿಸುಕಿ ಕೊಂದಿದ್ದಾನೆ. ಆದರೆ ಇದು ‘ಮರ್ಯಾದಾಗೇಡು ಹತ್ಯೆ’ ಎಂದು ತೋರುತ್ತದೆ ಎನ್ನಲಾಗಿದೆ. ಜನವರಿ 31 ರಂದು ದಕ್ಷಿಣ ಪ್ರಾಂತ್ಯದ ದಿವಾನಿಯಾದಲ್ಲಿ ಈ ಘಟನೆ ನಡೆದಿದೆ. ಮೃತ ಯುವತಿಯನ್ನು ಟಿಬಾ ಅಲ್-ಅಲಿ (22) ಎಂದು ಗುರುತಿಸಲಾಗಿದೆ.
ಟರ್ಕಿಯಲ್ಲಿ ಏಕಾಂಗಿಯಾಗಿ ವಾಸಿಸುವ ಆಕೆಯ ನಿರ್ಧಾರದಿಂದ ಹೆಸರು ಹೇಳಲಿಚ್ಛಿಸದ ಆಕೆಯ ತಂದೆ ಅಸಮಾಧಾನಗೊಂಡಿದ್ದರು ಎಂದು ಹೇಳಲಾಗುತ್ತಿದೆ. ಮೃತಳ ತಂದೆ ತನ್ನ ಅಪರಾಧವನ್ನು ಒಪ್ಪಿಕೊಂಡ ನಂತರ ಪೊಲೀಸರು ಬಂಧಿಸಿದ್ದಾರೆ.
ವಿವಾದದ ಸ್ವರೂಪವನ್ನು ಸಚಿವಾಲಯವು ಬಹಿರಂಗಪಡಿಸದಿದ್ದರೂ, ಸ್ಥಳೀಯ ಮಾಧ್ಯಮ ವರದಿಗಳು ಟರ್ಕಿಯಲ್ಲಿ ಹೊಸ ಜೀವನವನ್ನು ಪ್ರಾರಂಭಿಸಲು ಅಲಿ 2017 ರಲ್ಲಿ ತನ್ನ ಮನೆಯಿಂದ ಓಡಿಬಂದಿದ್ದಳು. ಆಕೆ ಸಿರಿಯನ್ ಮೂಲದ ತನ್ನ ಗೆಳೆಯನನ್ನು ಮದುವೆಯಾಗಲು ಯೋಜಿಸಿದ್ದಳು ಎಂದಿವೆ.
ಜನವರಿಯಲ್ಲಿ ಅರೇಬಿಯನ್ ಗಲ್ಫ್ ಕಪ್‌ನಲ್ಲಿ ತನ್ನ ದೇಶದ ಫುಟ್‌ಬಾಲ್ ತಂಡವನ್ನು ಬೆಂಬಲಿಸಲು ಅವಳು ಇರಾಕ್‌ಗೆ ಹಿಂದಿರುಗಿದಾಗ, ಅವಳ ಕುಟುಂಬವು ಅವಳನ್ನು ಅಪಹರಿಸಿತ್ತು