ಸಾಮಾಜಿಕ ಜಾಲತಾಣ, ವಿವಿಧ ಕ್ಷೇತ್ರದಲ್ಲಿ ಹೊಸ ಹೊಸ ಸ್ಟಾರ್ಗಳನ್ನು ಹುಟ್ಟುಹಾಕುತ್ತಿದೆ, ಎಲೆಮರೆ ಕಾಯಂತಿರುವ ಜನರ ಪ್ರತಿಭೆ, ಜ್ಞಾನವನ್ನು ಜಗತ್ತಿಗೆ ತಿಳಿಸಿಕೊಡಲು ವೇದಿಕೆಯಾಗಿದೆ.
ಇದೀಗ ಇರಾಕಿನ ರೈತ ಆಜಾದ್ ಮುಹಮದ್ ಅವರು ಬಿಸಿಲಿನಿಂದ ಒಣಗಿದ ಕಡೆಗಳಲ್ಲಿ ತಾಜಾ ಹಣ್ಣು ಮತ್ತು ತರಕಾರಿ ಬೆಳೆಯುವ ಸಲಹೆ ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.
ಸುಮಾರು ಅರ್ಧ ಮಿಲಿಯನ್ ಫೇಸ್ಬುಕ್ ಫಾಲೋಯರ್ಗಳನ್ನು ಹೊಂದಿರುವ 50 ವರ್ಷ ವಯಸ್ಸಿನ ಈ ರೈತ, ಹಣ್ಣಿನ ಮರಗಳನ್ನು ರಕ್ಷಿಸುವುದು, ಕೀಟಗಳ ನಿರ್ವಹಣೆ, ಜನರು ತಮ್ಮ ತೋಟಗಳಿಂದ ಹೆಚ್ಚಿನ ಲಾಭ ಗಳಿಸಲು ಸಹಾಯ ಮಾಡುವಂತಹ ವಿಷಯಗಳ ಕುರಿತು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾರೆ. ನಿಮ್ಮನ್ನು ಕೃಷಿ ಸಚಿವರನ್ನಾಗಿ ಮಾಡಬೇಕು ಎಂದು ಅವರ ಅಭಿಮಾನಿಗಳಲ್ಲಿ ಒಬ್ಬರಾದ ಅಹ್ಮದ್ ಹಸನ್ ಅವರು ಇತ್ತೀಚಿನ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.
ಮುಹಮದ್ ತನ್ನ ಸ್ಥಳಿಯ ಕುರ್ದಿಸ್ತಾನ್ ಪ್ರದೇಶ ಮತ್ತು ಅದರಾಚೆಗೆ ಪರಿಸರ ರಕ್ಷಿಸುವ ಮತ್ತು ಸ್ಥಳೀಯ ರೈತರನ್ನು ಬೆಂಬಲಿಸುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ತನ್ನ ಜನಪ್ರಿಯ ಆನ್ಲೈನ್ ಪ್ಲಾಟ್ಫಾರ್ಮ್ ಅನ್ನು ಸಹ ಬಳಸುತ್ತಾರೆ. ಅಭಿವೃದ್ಧಿ ಹೊಂದಿದ ದೇಶದ ರೈತರು ಸರ್ಕಾರದ ಬೆಂಬಲ ಮತ್ತು ಕೊಯ್ಲು ಯಂತ್ರಗಳನ್ನು ಹೊಂದಿದ್ದಾರೆ. ನಮ್ಮ ರೈತರು ತಮ್ಮದೇ ಆದ ಶ್ರದಿಂದ ಎಲ್ಲವನ್ನೂ ಮಾಡುತ್ತಾರೆ ಮತ್ತು ವರ್ಷದ ಕೊನೆಯಲ್ಲಿ ಅವರು ಹಣವನ್ನು ಕಳೆದುಕೊಂಡಾಗ, ಅವರು ಅದೇ ಉತ್ಸಾಹ ಮತ್ತು ಶಕ್ತಿಯೊಂದಿಗೆ ಪ್ರಾರಂಭಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ.