alex Certify 43 ವರ್ಷದ ಬಳಿಕ ಮೊದಲ ಬಾರಿಗೆ ಕ್ರೀಡಾಂಗಣದಲ್ಲಿ ಫುಟ್​ಬಾಲ್​ ಪಂದ್ಯ ವೀಕ್ಷಿಸಿದ ಇರಾನ್ ಮಹಿಳೆಯರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

43 ವರ್ಷದ ಬಳಿಕ ಮೊದಲ ಬಾರಿಗೆ ಕ್ರೀಡಾಂಗಣದಲ್ಲಿ ಫುಟ್​ಬಾಲ್​ ಪಂದ್ಯ ವೀಕ್ಷಿಸಿದ ಇರಾನ್ ಮಹಿಳೆಯರು…!

ಇದೊಂದು ಬಲು ಅಪರೂಪದ ಘಟನೆ. ಇರಾನ್​ನ ಅಧಿಕಾರಿಗಳು ಗುರುವಾರ ಸಂಜೆ ಟೆಹ್ರಾನ್​ನ ಆಜಾದಿ ಕ್ರೀಡಾಂಗಣದಲ್ಲಿ ಫುಟ್ಬಾಲ್​ ಆಟದಲ್ಲಿ ಭಾಗವಹಿಸಲು ಮಹಿಳೆಯರಿಗೆ ಅವಕಾಶ ನೀಡಿದ್ದಾರೆ.

ಇರಾನ್​ನ ಎರಡನೇ ಅತ್ಯಂತ ಜನಪ್ರಿಯ ತಂಡವಾದ ಎಸ್ಟೆಗ್ಲಾಲ್​ ಎಫ್​ಸಿ ಮತ್ತು ಮೆಸ್​-ಇ ಕೆರ್ಮನ್​ ನಡುವಿನ ರಾಷ್ಟ್ರೀಯ ಲೀಗ್​ ಪಂದ್ಯವು ಪ್ರಾರಂಭವಾದಾಗ ಕ್ರೀಡಾಂಗಣದೊಳಗೆ ಮಹಿಳೆಯರು ಹಾಜರಿರುವುದನ್ನು ಸಾಮಾಜಿಕ ಜಾಲತಾಣದ ಪೋಸ್ಟ್​ಗಳು ತೋರಿಸಿವೆ. ಈ ಮೂಲಕ ಮಹಿಳೆಯರ ಮೇಲಿದ್ದ 43 ವರ್ಷದ ಬ್ಯಾನ್ ಸಡಿಲಗೊಂಡಂತಾಗಿದೆ.

ಕ್ರೀಡಾಂಗಣದಲ್ಲಿ ಮಹಿಳೆಯರಿಗಾಗಿ ಗೊತ್ತುಪಡಿಸಿದ ವಿಶೇಷ ಪ್ರದೇಶದಲ್ಲಿ ಮಹಿಳೆಯರು ಎಸ್ಟೇಘ್ಲಾಲ್​ನ ಬ್ಲೂ ತಂಡದ ಧ್ವಜ ಬೀಸುತ್ತಿರುವುದನ್ನು ಮತ್ತು ಹುರಿದುಂಬಿಸುತ್ತಿರುವುದನ್ನು ವಿಡಿಯೋ ತುಣುಕಿನಲ್ಲಿ ಕಾಣಿಸುತ್ತಿದೆ.

ಮಾಹಿತಿಗಳ ಪ್ರಕಾರ 500 ಟಿಕೆಟ್​ಗಳನ್ನು ಮಹಿಳೆಯರಿಗೆ ಪ್ರತ್ಯೇಕವಾಗಿ ಮೀಸಲಿಡಲಾಗಿದೆ, ಆದರೂ ಎಷ್ಟು ಮಂದಿ ಭಾಗವಹಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಪಂದ್ಯದ ನಾಲ್ಕು ಗಂಟೆಗಳ ಮೊದಲು, ಮಹಿಳೆಯರಿಗೆ ನಿಗದಿಪಡಿಸಿದ ಟಿಕೆಟ್​ಗಳು ಬ್ಲಾಕ್​ ಮಾರುಕಟ್ಟೆಯಲ್ಲಿ ಸುಮಾರು 70 ಡಾಲರ್​ಗೆ ಮಾರಾಟವಾದವು, ಅವರ ಅಧಿಕೃತ ಬೆಲೆ 2 ಡಾಲರ್​ಗಿಂತ ಕಡಿಮೆ ಇದೆ.

1979ರ ಇಸ್ಲಾಮಿಕ್​ ಕ್ರಾಂತಿಯ ನಂತರ ಇರಾನ್​ನಲ್ಲಿ ಪುರುಷರ ಆಟಗಳು ಮತ್ತು ಇತರ ಕ್ರೀಡಾಕೂಟಗಳಿಗೆ ಹಾಜರಾಗುವುದನ್ನು ಮಹಿಳೆಯರಿಗೆ ನಿಷೇಧಿಸಲಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...