ಪ್ಯಾರಿಸ್: ಸುಮಾರು 18 ವರ್ಷಗಳ ಕಾಲ ಪ್ಯಾರಿಸ್ ವಿಮಾನ ನಿಲ್ದಾಣವನ್ನೇ ತನ್ನ ಮನೆಯಾಗಿಸಿಕೊಂಡು ಜೀವನ ಸಾಗಿಸುತ್ತಿದ್ದ ಇರಾನ್ ಮೂಲದ ವ್ಯಕ್ತಿ ಮೆಹ್ರಾನ್ ಕರಿಮಿ ನಸ್ಸೆರಿ ಮೃತಪಟ್ಟಿದ್ದಾರೆ.
1988ರಲ್ಲಿ ಇಲ್ಲಿನ ರೋಸಿ ಚಾರ್ಲ್ಸ್ ಡಿ ಗೌಲ್ ವಿಮಾನ ನಿಲ್ದಾಣದಲ್ಲಿ ಇವರು ರಾಜತಾಂತ್ರಿಕ ಗೊಂದಲದಲ್ಲಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. 1945ರಲ್ಲಿ ಇರಾನ್ ಪ್ರಾಂತ್ಯದ ಖುಜೆಸ್ತಾನ್‌ನಲ್ಲಿ ಜನಿಸಿದ್ದ ನಾಸ್ಸೆರಿ ಅವರು ತನ್ನ ತಾಯಿಯನ್ನು ಹುಡುಕಲು ಯುರೋಪಿಗೆ ಪ್ರಯಾಣ ಬೆಳೆಸಿದ್ದರು ದಾಖಲೆಗಳನ್ನು ಹೊಂದಿಲ್ಲದ ಕಾರಣ ಬ್ರಿಟನ್, ನೆದರ್ಲ್ಯಾಂಡ್ಸ್ ಮತ್ತು ಜರ್ಮನಿ ಸೇರಿದಂತೆ ದೇಶಗಳಿಂದ ಹೊರಹಾಕಲ್ಪಟ್ಟ ಅವರು ಬೆಲ್ಜಿಯಂನಲ್ಲಿ ಕೆಲವು ವರ್ಷಗಳ ಕಾಲ ವಾಸಿಸುತ್ತಿದ್ದರು. ಸರಿಯಾದ ವಲಸೆ ನಂತರ ಅವರು ಫ್ರಾನ್ಸ್‌ಗೆ ಹೋದರು. ಆದರೆ ಅಲ್ಲಿ ಇದೇ ಕಾರಣದಿಂದ ಅವರನ್ನು ಮುಂದಕ್ಕೆ ಪ್ರಯಾಣಿಸಲು ಅವಕಾಶ ನೀಡಿರಲಿಲ್ಲ.
ಬಳಿಕ ಅಲ್ಲಿಯೇ ನೆಲೆಸಿಬಿಟ್ಟಿದ್ದರು. ಇಲ್ಲಿ ಅವರು ಪತ್ರಿಕೆ ಓದುತ್ತಾ, ತಮ್ಮ ಜೀವನ ಚರಿತ್ರೆಯನ್ನು ಪುಸ್ತಕದಲ್ಲಿ ದಾಖಲು ಮಾಡುತ್ತಿದ್ದರು. ಅವರಿಗೆ ಫ್ರಾನ್ಸ್‌ನಲ್ಲಿ ಜೀವಿಸಲು ಅವಕಾಶ ನೀಡಲಾಗಿತ್ತು. ಅದರೆ ಇದೀಗ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರ ಕುತೂಹಲದ ಜೀವನದ ಬಗ್ಗೆ 2004ರಲ್ಲಿ “ದಿ ಟರ್ಮಿನಲ್” ಚಿತ್ರವೂ ನಿರ್ಮಾಣಗೊಂಡಿದೆ.