ಇರಾನ್ ನಲ್ಲಿ ಜನಸಂಖ್ಯೆ ಕಡಿಮೆಯಾಗ್ತಿದೆ. ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಹ್ಯೂಮನ್ ರೈಟ್ಸ್ ವಾಚ್, ಇರಾನ್ ನಲ್ಲಿ ಜನಸಂಖ್ಯೆ ಕಡಿಮೆಯಾಗ್ತಿದೆ ಎಂದು ವರದಿ ಮಾಡಿದೆ. ಇದ್ರ ನಂತ್ರ ಇರಾನ್ ಹೊಸ ಕಾನೂನು ಜಾರಿಗೆ ತಂದಿದೆ. ಇದು ಮಹಿಳೆಯರ ಖಾಸಗಿತನವನ್ನು ಉಲ್ಲಂಘಿಸಿದೆ ಎಂಬ ಆರೋಪವಿದೆ.
ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನಲ್ಲಿ ಹೊಸ ಕಾನೂನನ್ನು ನವೆಂಬರ್ 1 ರಂದು ಅಂಗೀಕರಿಸಲಾಗಿದೆ. ಇರಾನ್‌ನ ಜನಸಂಖ್ಯೆ ಹೆಚ್ಚಿಸುವ ಹೆಸರಿನಲ್ಲಿ ಈ ಕಾನೂನನ್ನು ಜಾರಿಗೆ ತರಲಾಗಿದೆ. ಕಾನೂನಿನ ಪ್ರಕಾರ, ಪುರುಷರು ಮತ್ತು ಮಹಿಳೆಯರು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗುವಂತಿಲ್ಲ. ಇರಾನ್ ನಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ನಿಷೇಧಿಸಲಾಗಿದೆ. ಇದಲ್ಲದೆ, ಇರಾನಿನ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಗರ್ಭನಿರೋಧಕ ಮಾತ್ರೆ ಉಚಿತ ವಿತರಣೆಯನ್ನು ನಿಷೇಧಿಸಲಾಗಿದೆ.
ಗರ್ಭಾವಸ್ಥೆಯ ಸಂದರ್ಭದಲ್ಲಿ ಮಹಿಳೆಯ ಆರೋಗ್ಯಕ್ಕೆ ಗಂಭೀರ ಅಪಾಯವಿದ್ದಲ್ಲಿ ಮಾತ್ರ ಗರ್ಭನಿರೋಧಕ ಮಾತ್ರೆಯನ್ನು ನೀಡಬಹುದೆಂದು ಕಾನೂನಿನಲ್ಲಿ ಹೇಳಲಾಗಿದೆ. ಏಳು ವರ್ಷಗಳವರೆಗೆ ಈ ನಿಯಮ ಜಾರಿಯಲ್ಲಿರಲಿದೆ. ಇರಾನ್ ಈಗಾಗಲೇ ಗರ್ಭಪಾತ ಮತ್ತು ಗರ್ಭನಿರೋಧಕವನ್ನು ನಿಷೇಧಿಸಿದೆ.
ಇದಲ್ಲದೆ ತಾಯಂದಿರಿಗೆ ವಿಶೇಷ ಯೋಜನೆಗಳನ್ನು ಇರಾನ್ ಘೋಷಿಸಿದೆ. ಗರ್ಭಿಣಿಯರು ಮತ್ತು ಹಾಲುಣಿಸುವ ಮಹಿಳೆಯರಿಗೆ ಉದ್ಯೋಗಾವಕಾಶ ನೀಡುವ ಭರವಸೆ ನೀಡಲಾಗಿದೆ. ಈ ಮೂಲಕ ಲಿಂಗತಾರತಮ್ಯಕ್ಕೆ ತೆರೆ ಎಳೆಯುವ ಪ್ರಯತ್ನವೂ ನಡೆದಿದೆ.